ಭಾರೀ ಗಾಳಿ, ಮಳೆಗೆ ಬೆದ್ರದ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದ 'ಕೊಡಿ ಮರ'ಕ್ಕೆ ಹಾನಿ.!


ಮೂಡುಬಿದಿರೆ: ಬೆದ್ರದಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದ ಕೊಡಿ ಮರ ಅಂದರೆ ಧ್ವಜ ಸ್ಥಂಭಕ್ಕೆ ಹಾನಿಯಾಗಿ ಕುಸಿತಗೊಂಡಿದೆ. ಬೆದ್ರದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಗಾಳಿ ಹಾಗೂ ಮಳೆ ಉಂಟಾಗುತ್ತಿದ್ದು ಇದರಿಂದ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ. 

ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಮುಂದಿನ ವರ್ಷ ನಡೆಸಲು ದಿನಾಂಕವೂ ನಿಗದಿಯಾಗಿತ್ತು. ಭಾರೀ ಮಳೆಗೆ ದೇವಸ್ಥಾನದ ಕೊಡಿಮರಕ್ಕೆ ಹಾನಿಯಾಗಿರುವುದು ಭಕ್ತರ ಆತಂಕಕ್ಕೂ ಕಾರಣವಾಗಿದೆ.