ಬನ್ನಡ್ಕಕ್ಕೆ ಸರ್ವಿಸ್ ರಸ್ತೆ ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆ ಮುಂದೂಡಿಕೆ


ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಬನ್ನಡ್ಕದಲ್ಲಿ ಸಾಲು ಸಾಲು ಅಪಘಾತಗಳ ಬಳಿಕ ಅಲ್ಲಿನ ಸ್ಥಳೀಯರು ಬನ್ನಡ್ಕದಲ್ಲಿ ಸರ್ವಿಸ್ ರಸ್ತೆ ನಿರ್ಮಾಣವಾಗಬೇಕು ಈ ಕುರಿತು ನಮ್ಮ ಜನಪ್ರತಿನಿಧಿಗಳು ಗಮನವಹಿಸಿ ಕಾರ್ಯಪ್ರವೃತ್ತರಾಗಬೇಕೆಂಬ ಬೇಡಿಕೆಯನ್ನಿಟ್ಟು ಮೇ 31ರ ಭಾನುವಾರದಂದು ಬನ್ನಡ್ಕದ ಸ್ಥಳೀಯರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು, ಅದರೆ ಇಂದು ಬೆಳಗ್ಗಿನಿಂದ ನಡೆದ ಕ್ಷೀಪ್ರ ಬೆಳವಣಿಗೆಯ ಕಾರಣದಿಂದಾಗಿ ಪ್ರತಿಭಟನೆಯನ್ನು ಮುಂದೂಡಲಾಗಿದೆ.

'Kadamba Media'ಕ್ಕೆ ಸಂಸದರ EXCLUSIVE ಪ್ರತಿಕ್ರಿಯೆ:

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ನಮ್ಮ 'ಕದಂಬ ಮೀಡಿಯಾ'ಕ್ಕೆ EXCLUSIVE ಪ್ರತಿಕ್ರಿಯೆ ನೀಡಿದ್ದು ಬನ್ನಡ್ಕಕ್ಕೆ ಸರ್ವಿಸ್ ರಸ್ತೆ ನಿರ್ಮಾಣ ಮಾಡುವುದು ನನ್ನ ಜವಾಬ್ದಾರಿ. ಅದಕ್ಕೆ ಪೂರಕವಾಗಿ ನಾನು ಹಾಗೂ ಶಾಸಕರು ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು. ಸಂಸದರ ಈ ಪ್ರತಿಕ್ರಿಯೆಯ ಬಳಿಕ ಪ್ರತಿಭಟನೆ ತಾತ್ಜಲಿಕ ಬ್ರೇಕ್ ನೀಡಲಾಗಿದೆ. ಈ ಬಗ್ಗೆ ಸ್ಥಳೀಯರು ಪ್ರಕಟನೆಯನ್ನು ಹೊರಡಿಸಿದ್ದು

ನಾಗರೀಕ ವೇದಿಕೆ ಬನ್ನಡ್ಕ 

ಆತ್ಮೀಯ ಗ್ರಾಮಸ್ತರೆ, 

ನಾಳೆ ಭಾನುವಾರ ನಾವು ರಾಷ್ಟ್ರಿಯ ಹೆದ್ದಾರಿಯ ಲೋಪ ದೋಷ ಮತ್ತು 

ಸರ್ವಿಸ್ ರಸ್ತೆ ಇದರ ಬಗ್ಗೆ ನಡೆಸಬೇಕಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ.

ಇಂದು ಸಂಜೆ ನಡೆದ ಸಭೆಯಲ್ಲಿ ಸರ್ವಿಸ್ ರಸ್ತೆ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಿರುತ್ತಾರೆ ಹಾಗೂ ಬರುವ ಶನಿವಾರದ ಒಳಗೆ M.P., MLA ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಖುದ್ದಾಗಿ ಇಲ್ಲಿಗೆ ಬಂದು ಖಂಡಿತವಾಗಿ ನಮ್ಮ ಸಮಸ್ಯೆಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿರುತ್ತಾರೆ. ಆದುದರಿಂದ ತಮ್ಮ ಸಹಕಾರ ನಮ್ಮ ಜೊತೆ ಇದೇ ರೀತಿ ಕೊನೆ ತನಕ ಇರಲಿ ಎಂದು ಈ ಮುಕೇನ ತಮ್ಮಲ್ಲಿ ವಿನಂತಿಸುತ್ತೇವೆ