ಗ್ಯಾರಂಟಿ ಬರೆ.? 3 ತಿಂಗಳಿನಿಂದ ಖಾತೆಗೆ ಬಾರದ ಸಂಧ್ಯಾ ಸುರಕ್ಷಾ, ವಿಧವ ವೇತನ ಹಾಗೂ ವಿಕಲಚೇತನರ ಪೆನ್ಸನ್; ಕಣ್ಣಿರು ಸುರಿಸುತ್ತಿರುವ ಫಲಾನುಭವಿಗಳು


ರಾಜ್ಯ ಸರ್ಕಾರದ ಗ್ಯಾರಂಟಿಯಿಂದ ಪೆನ್ಸನ್ ಫಲಾನುಭವಿಗಳ ಮೇಲೆ ಬರೆ ಬಿದ್ದಂತಾಗಿದೆ. ಕಳೆದ ಮೂರು ತಿಂಗಳಿನಿಂದ ಸಂಧ್ಯಾ ಸುರಕ್ಷಾ, ವಿಧವ ವೇತನ ಹಾಗೂ ವಿಕಲಚೇತನರ ಪೆನ್ಸನ್ ಖಾತೆಗೆ ಜಮಾ ಆಗದೆ ಫಲಾನುಭವಿಗಳು ಕಂಗಾಲಾಗಿದ್ದಾರೆ. ಕಳೆದ ಮೂರು ತಿಂಗಳಿನಿಂದ ಯಾವುದೇ ಹಣ ಖಾತೆಗೆ ಜಮಾವಣೆಯಾಗದೆ ಫಲನುಭವಿಗಳು ಕಂಗಾಲಾಗಿದ್ದಾರೆ. ಲಕ್ಷಾಂತರ ಕುಟುಂಬಗಳು ಇದೇ ಪೆನ್ಸನ್ ನಂಬಿಕೊಂಡು ಜೀವನ ಸಾಗಿಸುತ್ತಿದ್ದು ಈಗ ಪೆನ್ಸನ್ ಬಾರದೆ ಇರುವುದರಿಂದ ಕಣ್ಣಿರಿನಲ್ಲಿ ಕೈ ತೊಳೆಯುವಂತಾಗಿದೆ.

ಮೂರು ತಿಂಗಳಿನಿಂದ ಪೆನ್ಸನ್ ಬಾರದೆ ಇರುವುದಕ್ಕೆ ಸರ್ಕಾರ ಯಾವುದೇ ಕಾರಣವನ್ನು ನೀಡಿಲ್ಲ. ಸದ್ಯ ಮುಖ್ಯಮಂತ್ರಿಯ ಬದಲಾವಣೆಯೂ ಆಗುತ್ತಿದ್ದು, ಹೊಸ ಸರ್ಕಾರ ಅದಷ್ಟು ಶೀಘ್ರದಲ್ಲಿ ಪೆನ್ಸನ್ ಹಣವನ್ನು ರಿಲೀಸ್ ಮಾಡಲಿ ಎಂದು ಕಾಯುತ್ತಿದ್ದಾರೆ. ಸಂಬಧಪಟ್ಟ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಅದಷ್ಟು ಶೀಘ್ರದಲ್ಲಿ ಗಮನಹರಿಸಿ ಪೆನ್ಸನ್ ಹಣವನ್ನು ಬಿಡುಗಡೆಗೊಳಿಸಿದರೆ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ.