ಮೂಡುಬಿದಿರೆ: ಬನ್ನಡ್ಕ ಸರಣಿ ಅಪಘಾತ.! ಮನವಿ ಸಲ್ಲಿಸಲು ಹೋದ ಸ್ಥಳೀಯ ನಾಯಕರಿಗೆ ಸಂಸದ ಬ್ರಿಜೇಶ್ ಚೌಟ'ರಿಂದ ಅವಮಾನ.?


ಮೂಡುಬಿದಿರೆ: ಬನ್ನಡ್ಕ ಈ ಹೆಸರನ್ನು ಕೇಳಿದ ತಕ್ಷಣ ಮೂಡಬಿದಿರೆಯ ಪರಿಸರದ ಜನರು ಬೆಚ್ಚಿ ಬೀಳುವ ಪರಿಸ್ಥಿತಿ ಎದುರಾಗಿದೆ ಕಾರಣ ಈ ಜಾಗದಲ್ಲಿ ಸಂಭವಿಸುತ್ತಿರುವ ಸಾಲು ಸಾಲು ಅಪಘಾತಗಳು ಮತ್ತು ಸಂಭವಿಸುತ್ತಿರುವ ಸಾವು ಇದಕ್ಕೆ ಪ್ರಮುಖ ಕಾರಣ. ಕಳೆದ ಒಂದು ವಾರದಲ್ಲಿ ಆರಕ್ಕೂ ಅಧಿಕ ಅಪಘಾತಗಳು ಈ ಜಾಗದಲ್ಲಿ ನಡೆದಿದ್ದು ವಾಹನ ಸವಾರರನ್ನು ಬೆಚ್ಚಿ ಬೀಳಿಸಿದೆ. ಇದಕ್ಕೆ ನಿಖರವಾದ ಕಾರಣ ಏನು ಎಂಬುದು ಯಾರಿಗೂ ತಿಳಿದಿಲ್ಲ ಅದರೂ ಇಲ್ಲಿಗೆ ಸರ್ವಿಸ್ ರಸ್ತೆಯ ಅವಶ್ಯಕತೆ ಇದೆ ಎಂಬುದು ಆನೇಕರ ಬೇಡಿಕೆಯಾಗಿದೆ. ಈ ಬಗ್ಗೆ ಮನವಿ ಸಲ್ಲಿಸಲು ಹೋದ ಮೂಡುಬಿದಿರೆಯ ಸ್ಥಳೀಯ ನಾಯಕರಿಗೆ ಕನಿಷ್ಠ ಸೌಜನ್ಯ ತೋರಿಸದೆ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಅವಮಾನಿಸಿದರ ಎಂಬುದು ಸದ್ಯಕ್ಕಿರುವ ಪ್ರಶ್ನೆ.

ಬನ್ನಡ್ಕದಲ್ಲಿ ಸಂಭವಿಸುತ್ತಿರುವ ಸರಣಿ ಅಪಘಾತಗಳ ಸಂಸದರ ಗಮನಕ್ಕೆ ತರಲು ಪ್ರಯತ್ನಿಸಿದ ಮೂಡುಬಿದಿರೆಯ ಸ್ಥಳೀಯ ನಾಯಕರನ್ನೇ ಸಂಸದರು ಅವಮಾನಿಸಿದರು ಎಂದು ಬೆದ್ರದ ಸ್ಥಳೀಯ ಬಿಜೆಪಿ ನಾಯಕರೊಬ್ಬರು ತಮ್ಮ ಫೇಸ್ ಬುಕ್ ಮುಖ ಪುಟದಲ್ಲಿ ಬರೆದುಕೊಂಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.

"ಬನ್ನಡ್ಕದ ಸರಣಿ ಅಪಘಾತಗಳಿಗೆ ಸಂಬಧಿಸಿದಂತೆ ಸಂಸದರಾದ ಬ್ರಜೇಶ್ ಚೌಟಾ ಅವರ ಗಮನಕ್ಕೆ ತರಲು ಇವತ್ತು ಬೆಳಿಗ್ಗೆ 8 ಗಂಟೆಗೆ 2 ಬಾರಿ ಕರೆ ಮಾಡಿದ್ದೆ. ಕರೆ ಸ್ವೀಕರಿಸಿರಲಿಲ್ಲ. 11  ಗಂಟೆಗೆ ವಾಪಸ್ಸು ಕರೆ ಮಾಡಿದ ಸಂಸದರು, ಬನ್ನಡ್ಕದ ಸರಣಿ ಅಪಘಾತಗಳ ವಿಷಯವನ್ನು ಗಮನಕ್ಕೆ ತಂದು ಒಮ್ಮೆ ಸ್ಥಳಕ್ಕೆ ಭೇಟಿ ನೀಡುವಂತೆ ವಿನಂತಿಸಿಕೊಂಡೆ. ಇವತ್ತು ಸಂಜೆ 4 ಗಂಟೆಗೆ ಹೆದ್ದಾರಿ ಇಲಾಖೆಯ ಜೊತೆ ಬೇರೆ ಬೇರೆ ವಿಷಯಗಳ ಸಭೆ ಇದೆ ಸಾದ್ಯವಾದರೆ ನೀವು ಬನ್ನಿ ಎಂದು ಕರೆದರು. ನಾನು ಮತ್ತು ಅಲ್ಲಿಯ ಪ್ರಮುಖರು 4 ಜನ ಸಂಸದರ ಕಛೇರಿಗೆ ಹೋದೆವು.

ಹೆದ್ದಾರಿಯ ಅಧಿಕಾರಿಗಳೊಂದಿಗೆ ಸಭೆ ಮಾಡಿಸುತ್ತೇನೆ ಎಂದು ಕರೆದರು ಎಂದು ಸಂಸದರಾದ ಬ್ರಜೇಶ್ ಚೌಟಾ ಅವರ  ಕಛೇರಿಗೆ ಹೋದರೆ ಅಧಿಕಾರಿಗಳ ಮುಂದೆ ಕನಿಷ್ಟ ನಮ್ಮನ್ನು ಕುಳಿತುಕೊಂಡು ಮಾತಾನಾಡಿಸುವ ಸೌಜನ್ಯವೂ ಸಂಸದರ ಬಳಿ ಇಲ್ಲ. ಮನವಿ ಸ್ವೀಕರಿಸಿದ ಸಂಸದರು ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನ ಮಾಡುತ್ತೇನೆ ಎಂದಿದ್ದರೂ ಸಾಕಿತ್ತು ಅದನ್ನು ಬಿಟ್ಟು ಅಧಿಕಾರಿಗಳ ಮುಂದೆ ನಮ್ಮನ್ನು ಅವಮಾನಿಸುವ ಕೆಲಸ ನಡೆಯಿತು. ಈ ಕಾಮಗಾರಿ ಪೂರ್ಣ ಆಗುವವರಗೆ ಸರ್ವಿಸ್ ರಸ್ತೆ ಮಾಡಲು ಸಾದ್ಯವಿಲ್ಲ. ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಕನಿಷ್ಟ 2 ವರ್ಷ ಬೇಕು. 2 ವರ್ಷದಲ್ಲಿ ಇನ್ನಷ್ಟು ಅವಘಡಗಳು ಸಂಭವಿಸಬಹುದು ಎಂದು ಹೇಳಿದರೆ, 'ಈ ಅವಘಡಗಳಿಗೆ ಹೆದ್ದಾರಿ ಇಲಾಖೆಯೆ ಕಾಮಗಾರಿಯೆ ಕಾರಣ ಎಂದು ನೀವು ಹೇಗೆ ಹೇಳುತ್ತೀರಿ?' ಎನ್ನುವ ಪ್ರಶ್ನೆ.

2023 ರಲ್ಲಿ ಮನವಿ ಕೊಟ್ಟಿದ್ದರೆ ಕೊಟ್ಟಿರುವವರ ಬಳಿ ಹೋಗಿ ಕೇಳಿ.. !!

ರಾಘವೇಂದ್ರ ಮಠದ ಬಳಿ ಇರುವ ದಿಬ್ಬುವಿನ ಬಗ್ಗೆ ಹೇಳಿದರೆ “ನೀವೂ ಹೇಳಿದಂತೆ ಕಾಮಗಾರಿ ಮಾಡಲು ಸಾದ್ಯವಿಲ್ಲ." ಜನರ ಪ್ರತಿಭಟನೆಗೆ ನಾನು ಹೆದರೊದಿಲ್ಲ.

ಸ್ಥಳಕ್ಕೆ ಭೇಟಿ ನೀಡಲು ಕೇಳಿಕೆಂಡರೆ ಸದ್ಯಕ್ಕೆ ಸಾಧ್ಯವಿಲ್ಲ ಆ ಕಡೆ ಬಂದಾಗ ಸ್ಥಳಕ್ಕೆ ಬರುತ್ತೇನೆ ಎನ್ನುವ ಉಢಾಫೆಯ ಉತ್ತರ..!! ಅಧಿಕಾರಿಗಳು ರಸ್ತೆ ಸರಿ ಇದೆ ಜನರದ್ದೇ ತಪ್ಪು ಎನ್ನುವ ರೀತಿಯಲ್ಲಿ ಮಾತನಾಡುವಾಗ ಸಂಸದರು ತಿರುಗಿ ನಮ್ಮನ್ನೆ ಪ್ರಶ್ನಿಸುತಿದ್ದರು..!!

ಇನ್ನು ಮುಂದೆ ಬನ್ನಡ್ಕದಲ್ಲಿ ನಡೆಯುವ ಎಲ್ಲ ಅವಘಡಗಳಿಗೆ ಮಾನ್ಯ ಸಂಸದರು ಮತ್ತು ಹೆದ್ದಾರಿ ಇಲಾಖೆಯ. PD ನೇರ ಕಾರಣ..!! ಇಂಥವರು ನಮ್ಮ ಪ್ರತಿನಿಧಿಯಾಗಿರುವುದು ನಮ್ಮ ದುರಂತ.. !! ಇನ್ನೂ ನಿಮ್ಮಿಂದ ಸಮಸ್ಯೆಗೆ ಪರಿಹಾರ ಸಿಗತ್ತೆ ಎನ್ನುವ ಯಾವ ವಿಶ್ವಾಸವು ಇಲ್ಲ.

ರೀಲ್ಸ್ ಮಾಡಿ ಫೋಸ್ ಕೊಡುವುದಕ್ಕೂ ಪ್ರಮಾಣಿಕವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕು ಸಾಕಷ್ಟು ವ್ಯತ್ಯಾಸ ಇದೆ ಮಾನ್ಯ Brijesh Chowta ಅವರೇ.. ಜನರ ನಡುವೆ ಕೆಲಸ ಮಾಡಿ ಬಂದಿದ್ದರೆ ಆ ಕಷ್ಟ ನಿಮಗೆ ಅರ್ಥ ಆಗುತಿತ್ತು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತದಾರನಾಗಿ ನಿಮ್ಮನ್ನು ಪ್ರಶ್ನಿಸುವ ಎಲ್ಲ ಅಧಿಕಾರ ನಮಗೆ ಇದೆ. ಎಷ್ಟು ಬಾರಿ ಮೂಡುಬಿದಿರೆ ಕ್ಷೇತ್ರಕ್ಕೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ್ದೀರಿ. ದಯವಿಟ್ಟು ತಿಳಿಸಿ ಕೊಡಿ.  ಮಿನಿ ವಿಧಾನ ಸೌದಕ್ಕೆ ಯಾವತ್ತದರೂ ಭೇಟಿ ನೀಡಿದ್ದೀರಾ..??

ಹೆದ್ದಾರಿ ಕಾಮಗಾರಿಯಲ್ಲಿ ತೊಂದರೆ ಅನುಭವಿಸಿದ ಮೂಡುಬಿದಿರೆಯ ಜನರೊಂದಿಗೆ ಯಾವಾಗಲಾದರೂ ಸಂವಾದ ನಡೆಸಿದ್ದೀರಾ..?? ಬನ್ನಡ್ಕದ ಸರಣಿ ಅಪಘಾತಗಳಲ್ಲಿ ಮೃತ ಪಟ್ಟ ಎಷ್ಟು ಮನೆಯವರಿಗೆ ಸಾಂತ್ವನ ಹೇಳಿದ್ದೀರಿ.. ಎಷ್ಟು ಮನೆಯವರಿಗೆ ಪರಿಹಾರ ಒದಗಿಸಿಕೊಟ್ಟಿದ್ದೀರಿ ದಾಖಲೆ ಸಮೇತ ಜನರ ಮುಂದಿಡಿ. ಮೂಡುಬಿದಿರೆ ಮಂಡಲದ ಉಪಾಧ್ಯಕ್ಷದ ನನಗೆ ಈ ಪರಿಸ್ಥಿತಿಯಾದರೆ ಸಾಮನ್ಯ ಜನರ ಪಾಡೇನು..!"

ಸಂಸದರ ಭೇಟಿ ಬಳಿಕ ಅಸಮಾಧಾನಗೊಂಡು ಈ ಬಗ್ಗೆ ಸಮಗ್ರವಾಗಿ ಬರೆದುಕೊಂಡಿದ್ದು, ಸಂಸದರ ಈ ನಡೆಗೆ ಭಾರೀ ಟೀಕೆ ವ್ಯಕ್ತವಾಗಿದೆ. ಒರ್ವ ಸಂಸದನಾಗಿ ಹೆದ್ದಾರಿ ಇಲಾಖೆಯ ಅಧಿಕಾರಿಗಳ ಜೊತೆಗೆ ಸಮಗ್ರವಾಗಿ ಚರ್ಚಿಸಿ ಸ್ಥಳಕ್ಕೆ ಭೇಟಿ ನೀಡಿ ಯಾವ ಕಾರಣಕ್ಕೆ ಅಪಘಾತವಾಗುತ್ತಿದೆ ಎಂಬುದನ್ನು ತಿಳಿಯಬೇಕಿದ್ದವರು, ಮನವಿ ಸಲ್ಲಿಸಲು ತೆರಳಿದ್ದ ನಾಯಕರಿಗೆ ಮರು ಪ್ರಶ್ನೆ ಮಾಡುತ್ತಾರೆ ಎಂದರೆ ಇದು ಯಾವ ರೀತಿಯ ನಡೆ ಎಂಬುದು ಖಂಡಿತವಾಗಿಯೂ ತಿಳಿಯುತ್ತಿಲ್ಲ. ಬನ್ನಡ್ಕದಲ್ಲಿ ಸಾಲು ಸಾಲು ಅಪಘಾತಗಳು ಸಂಭವಿಸುತ್ತಿರುವುದರ ಬಗ್ಗೆ ಈಗಾಗಲೇ ಆನೇಕ ಭಾರೀ ವರದಿಯಾಗಿದ್ದರು ಈ ರೀತಿಯ ನಿರ್ಲಕ್ಷ್ಯ ತೋರುವುದು ಖಂಡಿತ ಸರಿಯಲ್ಲ, ಅವೈಜ್ಞಾನಿಕವಾದ ರಸ್ತೆಗಳು ಆನೇಕ ಕಡೆಗಳಲ್ಲಿ ಅಪಘಾತಕ್ಕೆ ಮೂಲ ಕಾರಣವಾಗಿದೆ ಅದ್ದರಿಂದ ಅಪಘಾತ ಸಂಭವಿಸುತ್ತಿರುವ ರಸ್ತೆಯನ್ನು ಪರಿಶೀಲಿಸಿ ಸರ್ವಿಸ್ ರಸ್ತೆಯ ಅವಶ್ಯತೆಯಿದ್ದಲ್ಲಿ ಅದನ್ನು ನಿರ್ಮಾಣ ಮಾಡುವಂತೆ ಸೂಚಿಸುವುದು ಸಂಸದರ ಕರ್ತವ್ಯ ಅದರ ಬದಲು ಸಮಸ್ಯೆ ಹೇಳಿಕೊಂಡು ಹೋದವರಿಗೆ ಮನವಿ ಸಲ್ಲಿಸಲು ಹೋದವರಿಗೆ ಮರು ಪ್ರಶ್ನಿಸಿ ಅವಮಾನ ಮಾಡುವುದು ಎಷ್ಟು ಸರಿ ಎನ್ನುವುದು ಆನೇಕರ ಪ್ರಶ್ನೆ. ಒರ್ವ ಸಂಸದ ತನ್ನ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎಲ್ಲಾ ವಿಧಾನಸಭಾ ಕ್ಷೇತ್ರದ ಜವಾಬ್ದಾರಿಯನ್ನು ಹೊಂದಿರುತ್ತಾನೆ ಅದ್ದರಿಂದ ಉಢಾಪೆಯ ಮಾತನಾಡದೆ ಸಮಸ್ಯೆಗಳನ್ನು ಬಗೆಹರಿಸುವ ಕ್ರಮವನ್ನು ಕೈಗೊಳ್ಳಬೇಕು.