ಏನಾಗಿದೆ ಈ ರಸ್ತೆಗೆ; ಬನ್ನಡ್ಕದಲ್ಲಿ ಮತ್ತೊಂದು ರಸ್ತೆ ಅಪಘಾತ


ಮೂಡುಬಿದ್ರೆ: ಮೂಡುಬಿದಿರೆಯ ಬನ್ನಡ್ಕ ರಸ್ತೆ ಅತ್ಯಂತ ಅಸುರಕ್ಷಿತ ರಸ್ತೆ ಎಂದು ಅಪಘಾತಗಳಿಂದಲೇ ಸಾಭೀತಾಗುತ್ತಿದೆ. ದಿನಂಪ್ರತಿ ಅಪಘಾತಗಳು ಸಂಭವಿಸುತ್ತಿದ್ದು ಭಯದ ವಾತಾವರಣ ನಿರ್ಮಾಣವಾಗಿದೆ. ಕಳೆದ ಒಂದು ವಾರದಲ್ಲಿ ಆರು ಅಪಘಾತಗಳು ಸಂಭವಿಸಿದ್ದು. ಇಂದು ಮತ್ತೇ ಕಾರು ಹಾಗೂ ಪಿಕಪ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.