ಗಣೇಶೋತ್ಸವ ಸಮಿತಿ ಕಲ್ಲಬೆಟ್ಟು: 25 ನೇ ವರ್ಷದ ಗಣೇಶೋತ್ಸವ ಆಮಂತ್ರಣ ಪತ್ರಿಕೆ ಹಾಗೂ ರಜತ ಸಂಭ್ರಮದ ಲೋಗೋ ಬಿಡುಗಡೆ


ಮೂಡುಬಿದಿರೆ: ಗಣೇಶೋತ್ಸವ ಸಮಿತಿ ಕಲ್ಲಬೆಟ್ಟು, ಕರಿಂಜೆ, ಮಾರೂರು  ಇದರ 25 ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ರಜತ ಸಂಭ್ರಮದ ಲೋಗೋ ಬಿಡುಗಡೆಗೊಳಿಸಲಾಯಿತು. ಎಂ. ಸಿ. ಎಸ್ ಬ್ಯಾಂಕ್ ಮೂಡಬಿದ್ರಿ ಇದರ ವಿಶೇಷ ಕಾರ್ಯ ನಿರ್ವಹಣಾಧಿಕಾರಿಯಾದ ಚಂದ್ರಶೇಖರ ಎಂ ಇವರು ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕ್ ನ ಅಕ್ಷಯಧಾಮ ಸಭಾಭವನದಲ್ಲಿ ಆಮಂತ್ರಣ ಪತ್ರಿಕೆ ಹಾಗೂ ಲೋಗೋ ಬಿಡುಗಡೆಗೊಳಿಸಿದರು.

ಗಣೇಶ ಸೇವಾ  ಟ್ರಸ್ಟ್ ನ ಅಧ್ಯಕ್ಷರಾದ ಎಂ ಬಾಹುಬಲಿಪ್ರಸಾದ್, ಟ್ರಸ್ಟಿ ಶ್ರೀಪತಿ ಭಟ್ ಹಾಗೂ ಟ್ರಸ್ಟ್ ನ ಸದಸ್ಯರು, ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ  ರಾಜೇಶ್ ಬೈಲೂರು ಹಾಗೂ ಸದಸ್ಯರು , ಸ್ವರ್ಣ ಗೌರಿ ಮಾತೃಮಂಡಳಿಯ ಅಧ್ಯಕ್ಷರಾದ ಶಕುಂತಲಾ ರಾಮಚಂದ್ರ ರಾವ್ ಹಾಗೂ ಸದಸ್ಯರು  ಹಾಗೂ ಎಲ್ಲಾ ಕಾರ್ಯಕರ್ತರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.