ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಭಾರೀ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಅಧಿಕಾರ ಹಂಚಿಕೆಯ ಚರ್ಚೆ ಕಳೆದ ಒಂದೂವರೆ ವರ್ಷಗಳಿಂದ ಚರ್ಚೆಯಾಗುತ್ತಿದೆಯಾದರು ಯಾವುದೇ ಸ್ಪಷ್ಟ ಹಾಗೂ ಅಧಿಕೃತ ಮಾಹಿತಿಗಳು ನಿನ್ನೆಯ ತನಕ ಹೊರಬಿದ್ದಿರಲಿಲ್ಲ ಅದರೆ ಸಂಪುಟ ಪುನರಚನೆಯ ಕುರಿತಾಗಿ ನಡೆಯಬೇಕಿದ್ದ ಸಭೆಯಲ್ಲಿ ಸಿದ್ದರಾಮಯ್ಯನವರ ರಾಜೀನಾಮೆಯನ್ನು ಕಾಂಗ್ರೆಸ್ ಹೈಕಮಾಂಡ್ ಕೇಳಿದೆ ಎಂಬ ಬಲವಾದ ಮಾಹಿತಿಗಳು ಹೊರಬೀಳುತ್ತಿದೆ.
ನೀವೂ ರಾಜ್ಯ ಸಭೆಗೆ ಬನ್ನಿ; ಹೊಸಬರಿಗೆ ಅವಕಾಶ ನೀಡಿ - ರಾಹುಲ್ ಗಾಂಧಿ
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ಜೊತೆ ನಿನ್ನೇ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ರಾಜ್ಯ ಸಭೆಗೆ ಬರುವ ಆಫರ್ ಸ್ವತಃ ರಾಹುಲ್ ಗಾಂಧಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಆಫರ್'ನ ಹಿಂದಿನ ಮರ್ಮವನ್ನು ಗಮನಿಸುವುದಾದರೆ ರಾಜ್ಯಸಭೆಗೆ ಬನ್ನಿ ಎಂದರೆ ನೀವೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಷ್ಟ್ರ ರಾಜಕಾರಣಕ್ಕೆ ಬನ್ನಿ ಎನ್ನುವುದಾಗಿದೆ. ಒಟ್ಟಾರೆಯಾಗಿ ಹೊಸಬರಿಗೆ ಅವಕಾಶ ಎನ್ನುವ ಮಾತಿನ ದಾಳಲದಲ್ಲಿ ಸಿಎಂ ಸಿದ್ದರಾಮಯ್ಯನವರ ರಾಜೀನಾಮೆಯನ್ನು ಕಾಂಗ್ರೆಸ್ ಹೈಕಮಾಂಡ್ ಕೇಳಿದ್ದು ಇದಕ್ಕೂ ಟಗರು ಒಪ್ಪಿಗೆ ನೀಡಿದ್ದು ನಾಳೆಯೇ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಗಳು ಹೊರ ಬಿದ್ದಿದೆ.
ಜಾತಿಗಣತಿ ವರದಿ ಸ್ವೀಕಾರ.!
ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವ ಮುನ್ನ ತಮ್ಮ ಕನಸಿನ ಭಾಗವಾಗಿದ್ದ ಜಾತಿ ಗಣತಿಯ ವರದಿಯ ಸ್ವೀಕರಿಸಲು ಸಿದ್ದರಾಗಿದ್ದು ಇಂದು ವಿಧಾನಸೌಧದಲ್ಲಿ ಜಾತಿ ಗಣತಿ ವರದಿಯನ್ನು ಹಿಂದುಳಿದ ವರ್ಗಗಳ ಆಯೋಗದಿಂದ ಪಡೆಯಲಿದ್ದಾರೆ.
ಒಟ್ಟಾರೆಯಾಗಿ ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಸಿದ್ದರಾಮಯ್ಯನವರು ಕೊನೆಗೂ ತಮ್ಮ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ಮಾಡಿದ್ದು ಈ ಮೂಲಕ ಕೊಟ್ಟ ಮಾತಿಗೆ ತಾವು ಎಂದು ತಪ್ಪುವವರಲ್ಲ ಎಂಬ ಸಂದೇಶವನ್ನು ಸಿದ್ದರಾಮಯ್ಯ ಸ್ಪಷ್ಟವಾಗಿ ರವಾನಿಸಿದ್ದರೆ. ರಾಷ್ಟ್ರರಾಜಕಾರಣಕ್ಕೆ ಸಿದ್ದರಾಮಯ್ಯನವರು ಹೋಗುವುದು ಅವರಿಗೆ ಇಷ್ಟವಿಲ್ಲ ಎಂದು ಕೂಡ ಹೇಳಲಾಗುತ್ತಿದೆ. ಈ ಹಿಂದಿನ ಮಾತಿನಂತೆ ಸಿದ್ದರಾಮಯ್ಯನವರ ಬಳಿಕ ಡಿ.ಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವುದು ಬಹುತೇಕ ಸ್ಪಷ್ಟ ಅದರೆ ಅವರ ಮುಂದಿನ ಎರಡು ವರ್ಷಗಳ ಆಡಳಿತ ಹಾದಿ ಮುಳ್ಳಿನ ಮೇಲಿನ ನಡಿಗೆ ಎಂದು ತಪ್ಪಾಗಲಾರದು.
