ಮೂಡುಬಿದಿರೆ: ಬೆದ್ರದ ಅಪಘಾತ ವಲಯವೆಂದು ಖ್ಯಾತಿ ಪಡೆದಿರುವ ಬನ್ನಡ್ಕಕ್ಕೆ ಹೆದ್ದಾರಿ ಕಾಮಗಾರಿ ಗುತ್ತಿಗೆದಾರ DBL ಕಂಪೆನಿಯ ಅಧಿಕಾರಿ ಪ್ರಸಾದ್ ಇಂದು ಭೇಟಿ ನೀಡಿದರು. ಈ ಸಂಧರ್ಭದಲ್ಲಿ ಸ್ಥಳದಲ್ಲಿ ಆನೇಕ ಸ್ಥಳೀಯರು ಭಾಗಿಯಾಗಿ ಇಲ್ಲಿ ಆಗುತ್ತಿರುವ ತೊಂದರೆಯ ಬಗ್ಗೆ ವಿವರಿಸಿದರು. ತಾತ್ಕಲಿಕವಾದ ಸರ್ವಿಸ್ ರೋಡ್ ನಿರ್ಮಾಣದ ಸಂಧಾನದ ಬಗ್ಗೆ ಚರ್ಚಿಸಲು ಗುತ್ತಿಗೆದಾರ ಕಂಪೆನಿಯವರು ಅಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿದ್ದು, ಅದರೆ ಸ್ಥಳೀಯರು ಸಂಸದರು ಸ್ಥಳಕ್ಕೆ ಭೇಟಿ ನೀಡಲೇ ಬೇಕು ಎಂದು ಆಗ್ರಹಿಸಿದರು.
ಬನ್ನಡ್ಕದಲ್ಲಿ ಇಷ್ಟೆಲ್ಲಾ ಸಾವು ನೋವುಗಳು ಸಂಭವಿಸಿದರು ಕೂಡ ನಮ್ಮಿಂದ ಆಯ್ಕೆಯಾದ ಸಂಸದರು ಭೇಟಿ ನೀಡದೆ ಇರುವುದು ನಮಗೆ ನೋವು ತಂದಿದೆ, ಸಂಸದರು ಇಲ್ಲಿಗೆ ಭೇಟಿ ನೀಡುವವರೆಗೂ ನಾವು ನಿಗದಿಪಡಿಸಿರುವ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಸ್ಥಳೀಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳು ಒಪ್ಪಿಗೆ ಸೂಚಿಸ ಬೇಕು ಹಾಗೂ ಸಂಸದರು ತಕ್ಷಣ ಇಲ್ಲಿಗೆ ಭೇಟಿ ನೀಡಲೇ ಬೇಕು ಎಂದು ಇದೇ ಸಂಧರ್ಭದಲ್ಲಿ ಆಗ್ರಹಿಸಿದರು. ಸರಣಿ ಅಪಘಾತಗಳು ಸಂಭವಿಸಿರುವ ರಾಷ್ಟ್ರೀಯ ಹೆದ್ದಾರಿ ಬನ್ನಡ್ಕಕ್ಕೆ ಸಂಸದರು ಭೇಟಿ ನೀಡಿ ಪರಿಶೀಲಿಸಬೇಕಾಗಿದ್ದು ಅವರ ಕರ್ತವ್ಯವಾಗಿದೆ ಎಂದು ಸ್ಥಳೀಯರು ಕಟುವಾದ ಮಾತುಗಳಿಂದ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.