ಮೂಡುಬಿದಿರೆ: ಬನ್ನಡ್ಕದಲ್ಲಿ ಮತ್ತೊಂದು ಅಪಘಾತ; ಸಾಕು ಇನ್ನೂ ಮೌನ- ರೊಚ್ಚಿಗೆದ್ದಿರುವ ಜನತೆ


 

ಮೂಡುಬಿದಿರೆ: ಕಲ್ಲು ಸಾಗಿಸುತ್ತಿದ್ದ ಲಾರಿಯೊಂದು ಬನ್ನಡ್ಕದಲ್ಲಿ ಪಲ್ಟಿಯಾಗಿದೆ. ಬನ್ನಡ್ಕದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು ಜನತೆ ಜನಪ್ರತಿನಿಧಿಗಳ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಸರ್ವಿಸ್ ರಸ್ತೆ ನಿರ್ಮಾಣಕ್ಕೂ ಭಾರೀ ದೊಡ್ಡ ಕೂಗು ಕೇಳಿಬರುತ್ತಿದೆ.

ಕಳೆದ ಒಂದು ವರ್ಷದಿಂದ ಇಲ್ಲಿ ನೂರಾರು ಅಪಘಾತಗಳು ಸಂಭವಿಸಿದ್ದು. ನಮ್ಮ ಜನಪ್ರತಿನಿಧಿಗಳು ಇದನ್ನು ಗಂಭೀರವಾಗಿ ಪರಿಗಣಿಸದಿರುವುದು ಎಲ್ಲಾರ ಆಕ್ರೋಶಕ್ಕೆ ಕಾರಣವಾಗಿದೆ.