ಮೂಡುಬಿದಿರೆ: ತಾಲೂಕಿನ ಸ್ಥಳೀಯ ಇನ್ಸ್‌ಪೆಕ್ಟರ್ ಸಂದೇಶ್ ಅವರ ಬಗೆಗಿನ ಆನೇಕ ಸುದ್ದಿಗಳು ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಈ ಮಧ್ಯೆ ಸಂದೇಶ್ ಪಿ.ಜಿ ವಿರುದ್ದ ಯಾವುದೇ ಆಕ್ಷೇಪಾರ್ಹ ಸುದ್ದಿಗಳನ್ನು ಪ್ರಕಟಿಸದಂತೆ ಮೂಡುಬಿದಿರೆಯ ಸಿವಿಲ್ ಜಡ್ಜ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯವು ಮಾಧ್ಯಮಗಳಿಗೆ ತಡೆಯಾಜ್ಞೆ ನೀಡಿದೆ.
ಈ ಸಂಬಂಧ ರಾಜ್ಯದ ೩೪ ಸುದ್ದಿ ಮಾಧ್ಯಮಗಳಿಗೆ ಹಾಗೂ ಮೂವರು ವ್ಯಕ್ತಿಗಳಿಗೆ ನ್ಯಾಯಾಲಯವು ಆದೇಶ ಜಾರಿಗೊಳಿಸಿದೆ. ಸಂದೇಶ್ ಅವರ ಮಾನಹಾನಿಗೆ ಕಾರಣವಾಗುವ ಅಥವಾ ವೈಯಕ್ತಿಕ ಬದುಕಿಗೆ ಧಕ್ಕೆ ಉಂಟುಮಾಡುವ ಯಾವುದೇ ರೀತಿಯ ಆಕ್ಷೇಪಾರ್ಹ ವಿಷಯಗಳನ್ನು ಪ್ರಕಟಿಸಬಾರದು ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.