ಜವನೆರ್ ಬೆದ್ರ ಫೌಂಡೇಶನ್(ರಿ.)'ನ ಮಹಿಳಾ ಘಟಕದ ಅಬ್ಬಕ್ಕ ಬ್ರಿಗೇಡ್'ಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕಳೆದ ದಿನ ನಡೆಯಿತು. ಮಹಿಳಾ ಘಟಕದ ಅಬ್ಬಕ್ಕ ಬ್ರಿಗೇಡಿನ ಮುಂದಿನ ಸಾಲಿನ ನೂತನ ಸಂಚಾಲಕರಾಗಿ ಸುನಿತಾ ಉದಯ್, ಕಾರ್ಯದರ್ಶಿಯಾಗಿ ರಮ್ಯಾ ದಿನೇಶ್ ಆಯ್ಕೆಯಾಗಿದ್ದಾರೆ.
ನಿನ್ನೆ ನಡೆದ ಸಭೆಯಲ್ಲಿ ಜವನೆರ್ ಬೆದ್ರ ಫೌಂಡೇಶನ್(ರಿ.) ಸಂಸ್ಥಾಪಕರಾದ ಅಮರ್ ಕೋಟೆ ಹಾಗೂ ಹಾಲಿ ಮಹಿಳಾ ಬ್ರಿಗೇಡ್ ಸಂಚಾಲಕಿಯಾಗಿದ್ದ ಸಹನಾ ನಾಯಕ್ ಹಾಗೂ ಇತರ ಸದಸ್ಯರು ಭಾಗಿಯಾಗಿದ್ದರು. ಮಹಿಳಾ ದಿನಾಚರಣೆಯ ಪ್ರಯುಕ್ತ ನಡೆಯುವ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.\
