ಅಮೆರಿಕ ಹಾಗೂ ಇಸ್ರೇಲ್ ದೇಶಗಳು ಇರಾನ್ ದೇಶದ ಮೇಲೆ ನಡೆಸಿರುವ ದಾಳಿಗೆ ಪ್ರತಿಯಾಗಿ ಇರಾನ್ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿದೆ. ಅಮೆರಿಕಾದ ಸೇನಾ ನೆಲೆಗಳು ಗಲ್ಫ್ ರಾಷ್ಟ್ರಗಳಲ್ಲಿರುವುದರಿಂದ ಇರಾನ್ ದುಬೈ, ಸೌದಿ ಆರೇಬಿಯಾ, ಕತಾರ್ ಹಾಗೂ ಇನ್ನಿತರ ಮಧ್ಯಪ್ರಾಚ್ಯ ರಾಷ್ಟ್ರಗಳ ಮೇಲೆ ದಾಳಿ ನಡೆಸಲು ಕಾರಣ. ಮಧ್ಯಪ್ರಾಚ್ಯಗಳ ರಾಷ್ಟ್ರಗಳಲ್ಲಿರುವ 27 ಅಮೆರಿಕಾ ಸೇನಾ ನೆಲೆಗಳ ಮಿಸೈಲ್ ಹಾಗೂ ಡ್ರೋನ್ ದಾಳಿಯನ್ನು ನಡೆಸಿದೆ. ಈ ಮೂಲಕ ಅಮೆರಿಕಾ ಸೇನಾ ನೆಲೆಗಳನ್ನು ಉಡೀಸ್ ಮಾಡುತ್ತಿದೆ.
ಗಲ್ಫ್ ರಾಷ್ಟ್ರಗಳಲ್ಲಿ ಕನ್ನಡಿಗರು ಹೆಚ್ಚಿರುವುದರಿಂದ ಆತಂಕ ಗೊಂಡಿದ್ದು, ಈ ದಾಳಿಗಳು ಯಾವ ಹಂತಕ್ಕೆ ತಲುಪಲಿದೆ ಎಂಬ ಭಯದ ವಾತವರಣದಲ್ಲಿದ್ದಾರೆ. ಸದ್ಯದ ಪರಿಸ್ಥಿತಿ ಸಂಪೂರ್ಣವಾಗಿ ಹತೋಟಿಯಲಿದ್ದು, ಕೆಲವೊಂದು ಕಡೆಗಳಲ್ಲಿ ದಾಳಿಯಾಗುತ್ತಿರುವುದರ ಬಗ್ಗೆ ವರದಿಯಾಗಿದೆ. ಇರಾನ್ ದೇಶ ಆರಬ್ ರಾಷ್ಟ್ರಗಳ ಮೇಲೆ ನಡೆಸಿದ ದಾಳಿಯಲ್ಲಿ ಒರ್ವ ಪಾಕಿಸ್ತಾನ ಪ್ರಜೆ ಸಾವನ್ನಾಪ್ಪಿರುವ ಬಗ್ಗೆ ವರದಿಯಾಗಿದೆ. ಈಗಾಗಲೇ ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದ್ದು, ತೀರ್ವ ಕಟ್ಟೆಚ್ಚರ ವಹಿಸಲಾಗಿದೆ ಹಾಗೂ ಯಾರು ಕೂಡ ಮನೆಯಿಂದ ಹೊರ ಬರದಂತೆ ಅಲ್ಲಿನ ಸರ್ಕಾರ ಸೂಚಿಸಿದೆ.
