ಬೆಂಗಳೂರು: ಕೆನಾಡದಲ್ಲಿ ಉದ್ಯೋಗದಲ್ಲಿದ್ದ ಚಂದನ್ ಕುಮಾರ್ ಎಂಬುವವರನ್ನು ಗುಂಡಿಕ್ಕಿ ಕೊ* ಮಾಡಿರುವ ಘಟನೆ ಕಳೆದ ರಾತ್ರಿ ನಡೆದಿದೆ. ಘಟನೆಗೆ ನಿಜವಾದ ಕಾರಣ ಏನು ಎಂಬುದು ತಿಳಿದು ಬಂದಿಲ್ಲ ಎಂದು ಪೋಷಕರು ಪ್ರತಿಕ್ರಿಯೆಸಿದ್ದಾರೆ.
ಮಗನ ಕೊ* ಸುದ್ದಿ ತಿಳಿದು ಪೋಷಕರು ದಿಗ್ಬ್ರಂತರಾಗಿದ್ದಾರೆ. ಕಳೆದ ಎಂಟು ತಿಂಗಳ ಹಿಂದೆ ಮಗ ಸ್ವದೇಶಕ್ಕೆ ಆಗಮಿಸಿದ್ದ, ಇನ್ನೂ ಇಲ್ಲಿಯೇ ಕೆಲಸ ಮಾಡು ಎಂದು ಪೋಷಕರು ತಿಳಿಸಿದ್ದಾಗಿ ವಿವರಿಸಿದ್ದಾರೆ. ಕಾರ್ಯ ನಿಮಿತ್ತ ಅಲ್ಲಿಗೆ ಹೋಗಿ ಮತ್ತೇ ಬರುವುದಾಗಿ ಕೆನಾಡಕ್ಕೆ ಚಂದನ್ ಕುಮಾರ್ ತೆರಳಿದ್ದು, ಈಗ ಈ ರೀತಿಯ ಘಟನೆ ನಡೆದಿದ್ದು ನಿಜಕ್ಕೂ ಅಘಾತಕಾರಿಯಾಗಿದೆ. ಚಂದನ್ ಕುಮಾರ್ ಅವರಿಗೆ ಸುಮಾರು ೩೮ ವರ್ಷ ವಯಸ್ಸಾಗಿತ್ತು, ಮದುವೆಗೆ ಹುಡುಗಿ ಹುಡುಕುತ್ತಿದ್ದುದ್ದಾಗಿ ತಂದೆ ಪ್ರತಿಕ್ರಿಯೆಸಿದ್ದಾರೆ.