ಮೂಡುಬಿದಿರೆ: ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಕೃಪಾಪೋಷಿತ ಯಕ್ಷಗಾನ ಮಂಡಳಿಯ 'ಶ್ರೀ ದೇವಿ ಮಹಾತ್ಮೆ' ಯಕ್ಷಗಾನ ಪ್ರಸಂಗ ಮೂಡುಬಿದ್ರೆ ಬೆಳುವಾಯಿಯ ಹರ್ಷಿಕಾ ನಿವಾಸ, ನಡಿಗುಡ್ಡೆ ದರ್ಖಾಸು ಕೆಸರ್'ಗದ್ದೆ ಇಲ್ಲಿ ಹಾಕಿರುವ ಭವ್ಯ ರಂಗ ಮಂಟಪದಲ್ಲಿ ಇದೇ ಬರುವ ಫೆಬ್ರವರಿ 11ರ ಬುಧವಾರ ಸಂಜೆ 6 ಗಂಟೆಯಿಂದ ಆರಂಭವಾಗಲಿದೆ.
'ಶ್ರೀ ದೇವಿ ಮಹಾತ್ಮೆ' ಯಕ್ಷಗಾನ ಪ್ರಸಂಗದ ಪೂರ್ವಭಾವಿಯಾಗಿ ನಡೆಯುವ ಚೌಕಿ ಪೂಜೆ ಹಾಗೂ ಯಕ್ಷಗಾನ ಪ್ರಸಂಗಕ್ಕೆ ತಾವೆಲ್ಲರೂ ಆಗಮಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಹರಿಪ್ರಸಾದ್ ಹಾಗೂ ಶ್ರೀಮತಿ ರಕ್ಷಾ ಆಚಾರ್ಯ ಮತ್ತು ಮಕ್ಕಳು ಹಾಗೂ ಕುಟುಂಬಸ್ಥರು ವಿನಂತಿಸಿಕೊಂಡಿದ್ದಾರೆ.
