ಮೂಡುಬಿದಿರೆ: ತಾಲೂಕಿನ ಅತ್ಯಂತ ಪುರಾತನ ಮೊಸರು ಕುಡಿಕೆ ಉತ್ಸವಗಳಲ್ಲಿ ಒಂದಾಗಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮೊಸರುಕುಡಿಕೆ ಉತ್ಸವದಲ್ಲಿ ಶ್ರೀ ಕೃಷ್ಣ ವೇಷ ಹಾಗೂ ಯಕ್ಷಗಾನ ಹಿಮ್ಮೇಳ ತಂಡದ ನೇತೃತ್ವ ವಹಿಸುತ್ತಿದ್ದ ಸುಧಾಕರ ಕುಲಾಲ್(75) ಮಳಲಿ ಇಂದು ಮುಂಜಾನೆ ವಿಧಿವಶರಾಗಿದ್ದರೆ.
ಸುಧಾಕರ್ ಕುಲಾಕ್ ಮಳಲಿ ದಶಕಗಳಿಂದ ಭಾಗವತಿಕೆ ಹಾಗೂ ಮದ್ದಳೆ ಸೇವೆ ಸಲ್ಲಿಸಿದ್ದರು. ಮೃತರ ಕುಟುಂಬಕ್ಕೆ ದೇವರು ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಗೋಪಾಲ ಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೆಸರರಾದ ಶ್ರೀ ಗುರುಪ್ರಸಾದ್ ಹೊಳ್ಳ ಹಾಗೂ ಜನನೆರ್ ಬೆದ್ರ ಫೌಂಡೇಶನ್(ರಿ.) ಸ್ಥಾಪಕರಾದ ಅಮರ್ ಕೋಟೆ ಸಂತಾಪ ಸೂಚಿಸಿದ್ದಾರೆ.