ಬಂಟ್ವಾಳ: ತಾಲೂಕಿನ ಪುಣಚ ಗ್ರಾಮದ ದೇವಿನಗರದ ಯುವಕನೋರ್ವ ದೂರದ ಚೆನ್ನರಾಯಪಟ್ಟನದಲ್ಲಿ ಸಾವನ್ನಾಪ್ಪಿರುವ ಘಟನೆ ನಡೆದಿದೆ. ವಿವೇಕಾನಂದ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ೨೫ ವರ್ಷದ ಯುವಕ ಊರಿಗೆ ಬರುವಾಗ ರೈಲಿನಿಂದ ಬಿದ್ದ ಪರಿಣಾಮ ಜೀವಾಂತ್ಯಗೊಳಿಸಿದ್ದಾನೆ ಎಂದು ವರದಿಯಾಗಿದೆ.
ರೈಲಿನಿಂದ ಹೊರಬಿದ್ದ ಯುವಕನ ಹೆಸರು ನಿಶಿತ್ ನಾಯ್ಕ್, ಈತ ರಾಜ್ಯಮಟ್ಟದ ಕಬ್ಬಡ್ಡಿ ಆಟಗಾರನಾಗಿಯೂ ಗುರುತಿಸಿಕೊಂಡಿದ್ದರು. ಸೋಮವಾರ ಬೆಂಗಳೂರಿನಿಂದ ಊರಿಗೆ ಬರಲು ರೈಲು ಹತ್ತಿದ್ದರು ಮರುದಿನ ಮುಂಜಾನೆ ಬೆಳಿಗ್ಗೆ ೨.೩೦ರ ಸುಮಾರಿಗೆ ರೈಲಿನಿಂದ ಹೊರಗೆ ಎಸೆಯಲ್ಪಟ್ಟಿದ್ದರ ಪರಿಣಾಮ ಈ ಸಾವು ಸಂಭವಿಸಿದೆ ಎಂದು ತಿಳಿದು ಬಂದಿದೆ. ಬೆಂಗಳೂರಿನಲ್ಲಿರುವ ಕಲ್ಯಾಣ್ ಜ್ಯುವೆಲರ್ಸ್ ನಲ್ಲಿ ಉದ್ಯೋಗಿಯಾಗಿದ್ದರು.