ದರೆಗುಡ್ಡೆ: ಶನೀಶ್ವರ ಪೂಜೆ, ಧಾರ್ಮಿಕ ಸಭೆ. ಉದ್ಯಮಿ ಅಜಯ್ ಶೆಟ್ಟಿ'ಗೆ ‘ಉದ್ಯಮ ರತ್ನ’ ಪ್ರಶಸ್ತಿ ಪ್ರದಾನ


ದರೆಗುಡ್ಡೆಯಲ್ಲಿ ಇತ್ತೀಚೆಗೆ ನಡೆದ ಕರಾವಳಿ ಕೇಸರಿ ಟ್ರಸ್ಟ್ (ಬೆದ್ರ) ಮತ್ತು ಕರಾವಳಿ ಕೇಸರಿ ಮಹಿಳಾ ಘಟಕ (ದರೆಗುಡ್ಡೆ) ಇವುಗಳ ಹದಿನಾಲ್ಕನೇ ವರ್ಷದ ವಾರ್ಷಿಕೋತ್ಸವ ಹಾಗೂ ಆರನೇ ವರ್ಷದ ಶನೀಶ್ವರ ಪೂಜಾ ಕಾರ್ಯಕ್ರಮವು ಅತ್ಯಂತ ವೈಭವದಿಂದ ಜರುಗಿತು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.

ರುದ್ರಾಂಶ ಕನ್ಸ್ಟ್ರಕ್ಷನ್ಸ್ ಮಾಲಕರಾದ ಉದ್ಯಮಿ ಅಜಯ್ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು.

ನ್ಯಾಯವಾದಿ ಶರತ್ ಶೆಟ್ಟಿ ಅವರು ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಚಾಲನೆ ನೀಡಿದರು. MLA ಉಮಾನಾಥ ಕೋಟ್ಯಾನ್, ರವೀಂದ್ರ ಶೆಟ್ಟಿ ಬಜಗೋಳಿ, ಜಗದೀಶ್ ಅಧಿಕಾರಿ, ನರಸಿಂಹ ಶೆಟ್ಟಿ ಮಾಣಿ, ಉದ್ಯಮಿ ಜಯಪ್ರಕಾಶ್ ಹಾಗೂ ವೇ.ಮೂ. ನಾಗರಾಜ ಭಟ್ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು.