ಮೂಡುಬಿದಿರೆ: ಕರಾವಳಿ ಕೇಸರಿ ಸೇವಾ ಟ್ರಸ್ಟ್(ರಿ.) ಮೂಡುಬಿದಿರೆ ಹಾಗೂ ಮಹಿಳಾ ಘಟಕ ದರೆಗುಡ್ಡೆ ಇದರ ೧೪ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಹಾಗೂ ೬ನೇ ವರ್ಷದ ಶನೀಶ್ವರ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವೂ ಫೆಬ್ರವರಿ ೨೧ರಂದು ದರೆಗುಡ್ಡೆಯ ಪ್ರಾರ್ಥಮಿಕ ಶಾಲಾ ಅವರಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮೂಡುಬಿದಿರೆಯ ಖ್ಯಾತ ಉದ್ಯಮಿ ಹಾಗೂ ರುದ್ರಾಂಶ್ ಕನ್ಸ್ಟ್ರಾಕ್ಷನ್ ಮಾಲೀಕರಾದ ಅಜಯ್ ಶೆಟ್ಟಿಯವರಿಗೆ ಉದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.
ರುದ್ರಾಂಶ್ ಕನ್ಸ್ಟ್ರಾಕ್ಷನ್ ಮೂಲಕ ಯಶಸ್ವಿ ಉದ್ಯಮಿ ಎಂಬ ಖ್ಯಾತಿ ಪಡೆಯುವುದರ ಜೊತೆಗೆ ತನ್ನ ಗಳಿಕೆಯ ದೊಡ್ಡ ಭಾಗವನ್ನು ಸಮಾಜದಲ್ಲಿನ ದುರ್ಬಲರಿಗೆ ಶಕ್ತಿ ತುಂಬಲು ಮೀಸಲಿಡುತ್ತಿರುವುದರ ಜೊತೆಗೆ ಕಳೆದ ಹಲವಾರು ವರ್ಷಗಳಿಂದ ಕಷ್ಟದಲ್ಲಿರುವವರಿಗೆ ಸಹಾಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಉದ್ಯಮ ಕ್ಷೇತ್ರದಲ್ಲಿನ ವಿಶೇಷ ಸಾಧನೆಯನ್ನು ಗುರುತಿಸಿ 'ಉದ್ರಮ ರತ್ನ' ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿದೆ.