ಮಂಗಳೂರಿನ ‘Reels Star' ಆಶಾ ಪಂಡಿತ್ ಹಠಾತ್ ನಿಧನ


ಮಂಗಳೂರು: ತನ್ನ ವಿಭಿನ್ನ ಶೈಲಿಯ ರಿಲ್ಸ್ ಮೂಲಕ ಮಂಗಳೂರಿನ ರಿಲ್ಸ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ಆಶಾ ಪಂಡಿತ್ ಹಠಾತ್ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. 
ಮಂಗಳೂರಿನ ನಾಗುರಿ ನಿವಾಸಿಯಾಗಿರುವ ಆಶಾ ಪಂಡಿತ್ ಶುಕ್ರವಾರ ಮುಂಜಾನೆ ಹೃದಯಾಘಾತದಿಂದ ನಿಧರಾಗಿರುವುದಾಗಿ ಕುಟುಂಬಸ್ಥರು ಖಚಿತ ಪಡಿಸಿದ್ದಾರೆ. ಮನೆಯ ಪರಿಸರದಲ್ಲಿಯೇ ಕುಸಿದು ಬಿದ್ದ ತಕ್ಷಣ ಅವರನ್ನು ಅಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು ಅಸ್ಪತ್ರೆಗೆ ಕರೆದೊಯ್ಯುವಾಗಲೇ ನಿಧನರಾಗಿದ್ದರೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. ಮಂಗಳೂರಿನ ಪಡೀಲ್ ಸಮೀಪದ ಸಣ್ಣ ಅಂಗಡಿಯೊಂದನ್ನು ನಡೆಸುತ್ತಿದ್ದ ಆಶಾ ಅವರು ಬಹಳ ಸರಳ ಜೀವನವನ್ನು ನಡೆಸುತ್ತಿದ್ದರು. 

ಇನ್ಸ್ಟಾಗ್ರಾಂ ರೀಲ್ಸ್ ಮೂಲಕ ಮಂಗಳೂರು ಭಾಗದಲ್ಲಿ ಭಾರೀ ಜನಪ್ರಿಯರಾಗಿದ್ದ ಆಶಾ ಅವರು ಗದರಿಸುವ ರೀಲ್ಸ್ ಮೂಲಕ ಖ್ಯಾತಿಯಾಗಿದ್ದರು. ಆಶಾ ಪಂಡಿತ್ ಅವರ ನಿಧನಕ್ಕೆ ಆನೇಕ ಜನರು ಶೋಕ ವ್ಯಕ್ತಪಡಿಸಿದ್ದಾರೆ.