ಮೂಡುಬಿದಿರೆ: ಪುತ್ತಿಗೆ ಗ್ರಾಮದ ಬೀರಬೆಟ್ಟು ಸಂಪಿಗೆ ನಿವಾಸಿಯಾಗಿರುವ ಶ್ರೀ. ಜಯಕರ ಪೂಜಾರಿ ಇವರ ಮಗಳಾದ ಕುಮಾರಿ ಅಕ್ಷತಾ ಕುಮಾರಿ ರವರು ಕಿಡ್ನಿ ವೈಫಲ್ಯ ಮತ್ತು ಸರ್ಪಸುತ್ತು ಖಾಯಿಲೆಯಿಂದ ತೀವ್ರವಾಗಿ ಬಳಲುತ್ತಿದ್ದಾರೆ. ತೀರಾ ಬಡ ಕುಟುಂಬದವರಾಗಿದ್ದು ಮನೆಯಲ್ಲಿ ವಯಸ್ಸಾದ ತಂದೆ ತಾಯಿಯವರಿಂದ ಚಿಕಿತ್ಸೆಗೆ ಬೇಕಾಗುವ ಮೊತ್ತವನ್ನು ಹೊಂದಿಸಲು ಅಸಾಧ್ಯವಾಗಿರುತ್ತದೆ. ಅಲ್ಲದೇ ಸದರಿಯವರ ತಂದೆಯವರು ದೀರ್ಘಕಾಲದ ಸಕ್ಕರೆ ಖಾಯಿಲೆ ಯಿಂದ ಹಾಸಿಗೆ ಹಿಡಿದಿದ್ದಾರೆ. ಪ್ರಸ್ತುತ ಚಿಕಿತ್ಸೆಗಾಗಿ ತಮ್ಮಿಂದಾಗುವ ಧನ ಸಹಾಯವನ್ನು ನೀಡಿ ಚಿಕಿತ್ಸೆಗೆ ಸಹಕಾರ ನೀಡುವಂತೆ ಕಳಕಳಿಯ ವಿನಂತಿ. ನಿಮ್ಮ ಕೈಯಲ್ಲಿ ಸಹಾಯ ಮಾಡಲು ಸಾಧ್ಯವಾಗದಿದ್ದಲ್ಲಿ ತೊಂದರೆ ಇಲ್ಲ ಬದಲಾಗಿ ನಿಮ್ಮ ಸ್ನೇಹಿತರು, ಬಂಧು ಬಳಗಕ್ಕೆ ಈ ಸುದ್ದಿಯನ್ನು ಕೂಡಲೇ ಸಂಪರ್ಕಿಸಿ.