ಪುತ್ತೂರು: ಪೋಕ್ಸೋ ಪ್ರಕರಣದ ಆರೋಪಿಗೆ ನ್ಯಾಯಲಯ ಜಾಮೀನು ಮಂಜೂರು ಮಾಡಿದೆ. ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ಆಪ್ರಾಪ್ತ ಬಾಲಕಿಗೆ ಹಲವಾರು ಬಾರಿ ಕೈ ಸನ್ನೆ ಮಾಡುವ ಮೂಲಕ ಮನೆಗೆ ಕರೆಯುತ್ತಿದ್ದ, ಆಪ್ರಾಪ್ತ ಬಾಲಕಿ ಅದನ್ನು ಆಕೆಯ ಅಕ್ಕನಿಗೆ ತಿಳಿಸಿದ್ದು ಬಳಿಕ ಉಪ್ಪಿನಂಗಡಿ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣವನ್ನು ಕೈಗೆತ್ತಿಕೊಂಡ ಪೋಲಿಸರು ಪೋಕ್ಸೋ ಕೇಸನ್ನು ದಾಖಲಿಸಿಕೊಂಡು ಆರೋಪಿಯನ್ನು ತನಿಖೆ ನಡೆಸಿದ್ದರು. ಪೆರಿಯಡ್ಕ ನಿವಾಸಿ ಮೊಹಮ್ಮದ್ ಮುಸ್ತಫ್ ಎಂಬಾತನನ್ನು ಬಂಧಿಸಿ ಪುತ್ತೂರಿನ ೫ನೇ ಹೆಚ್ಚುವರಿ ಹಾಗೂ ಜಿಲ್ಲಾ ಸತ್ರ ನ್ಯಾಯಲಯಕ್ಕೆ ಹಾಜರುಪಡಿಸಿದ್ದರು, ನ್ಯಾಯಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ಆರೋಪಿ ಮೊಹಮ್ಮದ್ ಮುಸ್ತಫ್'ಗೆ ನ್ಯಾಯಲಯ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರ ಬೆಳ್ತಂಗಡಿಯ ವಕೀಲರಾದ ಉಷಾ ಎನ್.ಜಿ ವಾದ ಮಂಡಿಸಿದ್ದರು.