ಎಕ್ಸಲೆಂಟ್ ಕಾಲೇಜಿನಲ್ಲಿ ಅಬ್ಬಕ್ಕ ಪ್ರೇರಣಾದಾಯಿ ಉಪನ್ಯಾಸ ಸರಣಿ: 5 ಸಾಧಕರಿಗೆ ವಿಶೇಷ ಗೌರವ.!


ಮೂಡುಬಿದ್ರೆ: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ ಮಂಗಳೂರು ವಿಭಾಗವು ಆಯೋಜಿಸುವ ಅಬ್ಬಕ್ಕ @500 ಪ್ರೇರಣಾದಾಯಿ ಉಪನ್ಯಾಸ ಸರಣಿಯ 99ನೇ ಕಾರ್ಯಕ್ರಮವು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳು ಮೂಡಬಿದಿರೆ ಇಲ್ಲಿ ಜನವರಿ 12 ಅಪರಾಹ್ನ 3:30ಕ್ಕೆ ಕಾಲೇಜಿ ಸಭಾಂಗಣದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮವನ್ನು ವೀರರಾಣಿ ಅಬ್ಬಕ್ಕರ ವಂಶಸ್ಥರಾದ ಧರ್ಮಸ್ಥಳದ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ರವಿ ಅಲೆವೂರಾಯ ಯಕ್ಷಗಾನ ಗುರುಗಳು ಹಾಗೂ ಮುಖ್ಯ ಶಿಕ್ಷಕರು ನವಭಾರತ ರಾತ್ರಿ ಪ್ರೌಢಶಾಲೆ, ಮಂಗಳೂರು, ಹಾಗೂ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಇದರ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಮಾಧವ ಎಂ ಕೆ ಅವರು ಉಪಸ್ಥಿತರಿರುವರು.

ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿತಾ ಯುವರಾಜ್ ಜೈನ್ ಅವರನ್ನು ಅಬ್ಬಕ್ಕ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಗುವುದು. ಅಂತೆಯೇ ರಾಣಿ ಅಬ್ಬಕ್ಕ ಕುರಿತಾಗಿ ಇದುವರೆಗೆ ಗಮನಾರ್ಹವಾಗಿ ಸೇವೆ ಸಲ್ಲಿಸಿದ ಗಣ್ಯರಿಗೆ ಗೌರವ ಸಮರ್ಪಣೆ ನಡೆಯಲಿದೆ. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಸಂಚಯಗಿರಿ, ಬಂಟ್ವಾಳ ಇದರ ಅಧ್ಯಕ್ಷರಾದ ಡಾ. ತುಕಾರಾಂ ಪೂಜಾರಿ, ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಉಳ್ಳಾಲ ಇದರ ಅಧ್ಯಕ್ಷರಾದ ದಿನಕರ್ ಉಳ್ಳಾಲ್‌, ಯಕ್ಷಾಂಗಣ ಮಂಗಳೂರು ಇದರ ಕಾರ್ಯಧ್ಯಕ್ಷರಾದ ಶ್ರೀ ಭಾಸ್ಕರ್ ರೈ ಕುಕ್ಕುವಳ್ಳಿ,  ಶ್ರೀ ಅಮರ್‌ಕೋಟೆ ಸಂಸ್ಥಾಪಕರು, ಜವನೆರ್‌ಬೆದ್ರ ಫೌಂಡೇಶನ್‌(ರಿ), ಡಾ ಯು ಕೆ ಯಾದವ ಸಸಿಹಿತ್ಲು ವಿಶ್ರಾಂತ ಪ್ರಾಂಶುಪಾಲರು, ಸಂಶೋಧಕರು ಮತ್ತು ಸಾಹಿತಿಗಳು, ಉಡುಪಿ ಇವರನ್ನು ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.