ಮೂಡುಬಿದಿರೆ: ತೆಂಕಮಿಜಾರಿನ ಗ್ರಾಮ ಪಂಚಾಯತಿ ವ್ಯಾಪ್ತಿಯ ಉಳಯಂಗಡಿ ಎಂಬಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಅಂಗನವಾಡಿ ಕಟ್ಟಡ ನಿರ್ಮಾಣ ಕಾರ್ಯದ ಶಿಲಾನ್ಯಾಸವನ್ನು ಮೂಡುಬಿದಿರೆ ಶಾಸಕ ಉಮನಾಥ್ ಕೋಟ್ಯಾನ್ ಸ್ಥಳೀಯರ ನೇತೃತ್ವದಲ್ಲಿ ನೆರವೇರಿಸಿದರು.
ತೆಂಕಮಿಜಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೧ನೇ ವಾರ್ಡ್'ಗೆ ಹೊಸ ಮಾರುಕಟ್ಟೆಯ ಶಿಲಾನ್ಯಾಸ ಕಾರ್ಯವನ್ನು ಕೂಡ ನೆರವೇರಿಸಿದರು. ಈ ಮೂಲಕ ೧ನೇ ವಾರ್ಡ್'ನ ಜನತೆಯ ಮಾರುಕಟ್ಟೆ ನಿರ್ಮಾಣದ ಬೇಡಿಕೆಗೆ ಮೊದಲ ಮುದ್ರೆ ಹಾಕಿದಂತಾಗಿದೆ.