ಬೆಂಗಳೂರು: ರಾಜ್ಯದಲ್ಲಿ ಪರೀಕ್ಷೆಗಳ ಕಾಲ ಹತ್ತಿರವಾಗುತ್ತಿದೆ. ಎಸ್.ಎಸ್.ಎಲ್.ಸಿ, ಪಿಯುಸಿ, ಸಿಇಟಿಯಂತಹ ಸಾಲು ಸಾಲು ಪರೀಕ್ಷೆಗಳು ಮಾರ್ಚ್ ಹಾಗೂ ಏಪ್ರಿಲ್ ತಿಂಗಳುಗಳಲ್ಲಿ ಬರಲಿವೆ. ಈ ಪರೀಕ್ಷೆಗಳಲ್ಲಿ ಪಾಸ್ ಮಾರ್ಕ್ಸ್ ಗಳಿಸಲು ಆನೇಕ ವಿದ್ಯಾರ್ಥಿಗಳು ಕಳ್ಳ ದಾರಿ ಹಿಡಿಯುವುದು ಸರ್ವೇ ಸಾಮಾನ್ಯವಾಗಿದೆ. ಪ್ರಶ್ನೆ ಪತ್ರಿಕೆಗಳು ಲೀಕ್ ಆಗಿವೆ ಹಣ ಕೊಟ್ಟರೆ ಪ್ರಶ್ನೆ ಪತ್ರಿಕೆಗಳನ್ನು ನೀಡುತ್ತೆವೆ ಎಂಬ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳನ್ನು ಹರಿದಾಡುತ್ತಿವೆ. ಈ ರೀತಿಯ ಪೋಸ್ಟ್ ಗಳ ಹಿಂದೆ ಹೋಗಿ ಹಣಗಳನ್ನು ಕಳೆದುಕೊಳ್ಳಬೇಡಿ ಎಂಬ ಎಚ್ಚರಿಕೆಯ ಸಂದೇಶಗಳನ್ನು ಶಿಕ್ಷಣ ಇಲಾಖೆ ಎಚ್ಚರಿಸಿದೆ.
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಹಣ ನೀಡಿದರೆ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಕಳುಹಿಸಿಕೊಡುತ್ತೇವೆ ಎಂಬ ಪೋಸ್ಟ್, ವಿಡಿಯೋ ಹಾಗೂ ಮೇಸೆಜ್ ಗಳು ಭಾರೀ ವೈರಲ್ ಆಗುತ್ತಿದ್ದು ನೂರು ರೂಪಾಯಿ ಆನ್ ಲೈನ್ ಮೂಲಕ ಪಾವತಿ ಮಾಡಿದರೆ ನಾವು ನಿಮಗೆ ಪ್ರಶ್ನೆಪತ್ರಿಕೆ ಕಳುಹಿಸಿಕೊಡುತ್ತೇವೆ ಎಂದು ವಂಚಕರು ನಕಲಿ ಜಾಲ ಕೆಲಸ ಮಾಡುತ್ತಿದ್ದು ಈ ರೀತಿಯ ಯಾವುದೇ ಮಾಹಿತಿಗೆ ಮೋಸ ಹೋಗಬೇಡಿ ಎಂದು ಶಿಕ್ಷಣ ಇಲಾಖೆ ಎಚ್ಚರಿಕೆಯ ಸಂದೇಶ ರವಾನಿಸಿದೆ ಹಾಗೂ ಈ ರೀತಿ ಮಾಡುತ್ತಿರುವವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಲು ಶಿಕ್ಷಣ ಇಲಾಖೆ ಸಜ್ಜಾಗಿದೆ.
