ಮೂಡುಬಿದಿರೆ: ಇಲ್ಲಿನ ಏದಾಡಿ ನಿವಾಸಿ ಹಾಗೂ ಪ್ರಗತಿಪರ ಕೃಷಿಕರಾಗಿರುವ ದಿನೇಶ್ ಎಂ ಬಂಗೇರ ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಇವರು ಪತ್ನಿ, ಪುತ್ರ ಪತ್ರಕರ್ತ ಸುನಿಲ್ ಬಂಗೇರ, ಪುತ್ರಿ ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ದಿವ್ಯಾ, ಅಳಿಯ, ಸೊಸೆ ಸೇರಿ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೂಲತಃ ಬಂಟ್ವಾಳ ತಾಲೂಕಿನ ಕೊಯಿಲದವರಾದ ಇವರು ಸಿದ್ಧಕಟ್ಟೆ, ರಾಯಿಯಲ್ಲಿ ಕೆಲ ವರ್ಷ ನೆಲೆಸಿದ್ದರು. ಕಳೆದ ಕೆಲವು ವರ್ಷಗಳಿಂದ ಇವರು ಮೂಡುಬಿದಿರೆಯ ಯೆದಾಡಿಯಲ್ಲಿ ವಾಸವಾಗಿದ್ದರು. ಇವರ ನಿಧನಕ್ಕೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.