ಮೂಡುಬಿದಿರೆ ಯುವತಿ ಆತ್ಮಹ'ತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ - ಯುವಕನ ಬಂಧನ.?


ಮೂಡುಬಿದಿರೆ: ಗಾಂಧಿನಗರದ ನವ್ಯ ಎಂಬ ನಿವಾಸಿ ಬೆದ್ರದ ಖಾಸಗೀ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದು ಆಕೆ ನಿನ್ನೇ ಏಕಾಏಕಿ ಗುರುಪುರದ ನದಿಗೆ ಹಾರಿ ಆತ್ಮಹ'ತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಘಟನೆಯ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ಈ ಬಗ್ಗೆ ತನಿಖೆ ನಡೆಸಿ ಯುವತಿಯ ಪ್ರಿಯಕರನನ್ನು ಬಂಧಿಸಿದ್ದಾರೆ. ತೀರ್ವವಾಗಿ ತನಿಖೆ ನಡೆಸುತ್ತಿರುವ ಪೋಲಿಸರು ಯುವಕನನ್ನು ಬಂಧಿಸಿ ನ್ಯಾಯಾಲಯಕ್ಕೆ ವಿಚಾರಣೆಯ ಬಳಿಕ ಹಾಜರುಪಡಿಸಲಿದ್ದಾರೆ. ಸುಮಾರು ೨೧ ವರ್ಷ ಪ್ರಾಯದ ಮನೋಜ್ ಎಂದು ಗುರುತಿಸಲಾಗಿದೆ.

ಖಾಸಗೀ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ ನವ್ಯ ಸೋಮವಾರದಂದು ತನ್ನ ಸ್ನೇಹಿತೆಯೊಂದಿಗೆ ಗುರುಪುರ ನದಿ ತೀರಕ್ಕೆ ತೆರಳಿ ಏಕಾಏಕೀ ನದಿಗೆ ಹಾರಿದ್ದಾರೆ. ಇದನ್ನು ಗಮನಿಸಿದ ಸ್ನೇಹಿತೆ ಗಾಬರಿಯಾಗಿ ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ. ಆ ಬಳಿಕ ಸ್ಥಳೀಯರ ಸಹಾಯದಿಂದ ಪ್ರಯತ್ನಿಸಲಾಗಿದ್ದರು ಅದು ಯಶಸ್ವಿಯಾಗಲಿಲ್ಲ ಆ ವೇಳೆಗೆ ಪ್ರಾಣಪಕ್ಷಿ ಹಾರಿ ಹೋಗಿತ್ತು.