ಮಂಗಳೂರಿನ ಪಿಲುಕುಳದಲ್ಲಿ ಡಿಸೆಂಬರ್ ೨೩ ರಿಂದ ೨೮ರವರೆಗೆ ನಡೆದ ರಾಷ್ಟ್ರೀಯ ಮಟ್ಟದ ನೆಟ್ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕದ ತಂಡವೂ ವಿಜೇತರಾಗಿ ಹೊರಹೊಮ್ಮಿದೆ. ಒಟ್ಟು 24 ರಾಜ್ಯಗಳು ಭಾಗವಹಿಸಿದ್ದ ಈ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡವು ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದ್ದು, ಜೈನ್ ಪ್ರೀ–ಯುನಿವರ್ಸಿಟಿ ಕಾಲೇಜಿನ ಮೂರು ವಿದ್ಯಾರ್ಥಿನಿಯರು ಈ ತಂಡವನ್ನು ಪ್ರತಿನಿಧಿಸಿದ್ದರು. ವಾಣಿಜ್ಯ ವಿಭಾಗ ಕುಮಾರಿ ಅನ್ವಿತಾ ಹಾಗೂ ಸುರಕ್ಷಾ ಮತ್ತು ಕಲಾ ವಿಭಾಗದ ಸಿಂಚನಾ ಈ ವಿಜೇತ ತಂಡದ ಸ್ಪರ್ಧಿಗಳಾಗಿದ್ದರು.
ಕರ್ನಾಟಕ ಬಾಲಕರ ತಂಡವೂ ರನ್ನರ್‌ಅಪ್ ಸ್ಥಾನವನ್ನು ಗಳಿಸಿದ್ದು, ಆ ತಂಡದಲ್ಲಿ ಜೈನ್ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದ ಶ್ರೀ ವೃಷಭ್ ಶೆಟ್ಟಿ ಈ ಶ್ಲಾಘನೀಯ ತಂಡದ ಸದಸ್ಯರಾಗಿದ್ದುನ,ೀ ನಾಲ್ಕು ವಿದ್ಯಾರ್ಥಿಗಳನ್ನು ಜೈನ್ ಸಂಸ್ಥೆಯ ವತಿಯಿಂದ ಸೂಕ್ತ ರೀತಿಯಲ್ಲಿ ಗೌರವಿಸಲಾಗುವುದು ಎಂಬುದಾಗಿ ಸಂಚಾಲಕರಾದ ಶ್ರೀ ಕೆ. ಹೇಮರಾಜ್ ತಿಳಿಸಿದರು. ವಿಜೇತ್ ತಂಡಗಳಿಗೆ ಹಾಗೂ ಜೈನ್ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು, ಉಪನ್ಯಾಸಕ ವೃಂದ ಹಾಗೂ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.