ಎಕ್ಸಲೆಂಟ್ ಕಾಲೇಜಿನ ಜೇಸಿ ವಿಕ್ರಮ ನಾಯಕ್ ಗೆ ರಾಷ್ಟ್ರೀಯ ತರಬೇತುದಾರ ಪದವಿ.!


ಅಂತಾರಾಷ್ಟ್ರೀಯ ಸಂಸ್ಥೆ ಜೇಸಿಸ್ ನ ರಾಷ್ಟ್ರೀಯ ತರಬೇತುದಾರರಾಗಿ ಕಾರ್ಕಳದ ಜೇಸಿ ವಿಕ್ರಮ ನಾಯಕ್ ಕೆ ಪದವಿಯನ್ನು ಪಡೆದಿರುತ್ತಾರೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಜೇಸಿಐ ರಾಷ್ಟ್ರೀಯ ಸಮ್ಮೇಳನದಲ್ಲಿ ಪದವಿ ಪ್ರದಾನ ಕಾರ್ಯಕ್ರಮ ನಡೆಯಿತು.

ವಿಕ್ರಮ ನಾಯಕ್ ಅವರು ಒಂದೂವರೆ ದಶಕಗಳಿಂದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಕಳೆದ ಹತ್ತು ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಜೀವನ ಕೌಶಲ ತರಬೇತಿಯನ್ನು ನೀಡಿರುತ್ತಾರೆ. 

ಗ್ಲೋಬಲ್ ಕರಿಯರ್ ಕೌನ್ಸೆಲಿಂಗ್ ಸಂಸ್ಥೆಯಿಂದ ಪ್ರಮಾಣೀಕೃತ ವೃತ್ತಿ ಮಾರ್ಗದರ್ಶಕರಾಗಿಯೂ ಇಲ್ಲಿಯವರೆಗೆ ನೂರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುತ್ತಾರೆ. ಪ್ರಸ್ತುತ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ಇಂಗ್ಲೀಷ್ ವಿಭಾಗದ ಮುಖ್ಯಸ್ಥಾರಾಗಿದ್ದು ಜೇಸಿಐ ಮಂಗಳೂರು ಸಾಮ್ರಾಟ್ ನ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.