ಮೂಡುಬಿದಿರೆ: ಮೂಲ್ಕಿ-ಮೂಡುಬಿದಿರೆಯ ಬಿಜೆಪಿ ಮಂಡಲ ಯುವಮೋರ್ಚ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಯುವ ಮೋರ್ಚಾದ ಅಧ್ಯಕ್ಷರಾಗಿ ಕುಮಾರ್ ಪ್ರಸಾದ್ ಮತ್ತೊಮ್ಮೆ ಪುನರ್ ಆಯ್ಕೆಯಾಗಿದ್ದಾರೆ.
ಯುವಮೋರ್ಚಾ ಮಂಡಲದ ಉಪಾಧ್ಯಕ್ಷರಾಗಿ ರಂಜನ್ ಕರ್ನಿರೆ, ಉಮೇಶ್ ಮುಲ್ಕಿ, ಸಚಿನ ಪಣಪಿಲ ಹಾಗೂ ಜೀವಂಧರ್ ಶೆಟ್ಟಿಗಾರ್ ಕೇಮಾರು ಆಯ್ಕೆಯಾದರೆ ಸಂಘಟನೆಯ ಪ್ರಧಾನ ಕಾರ್ಯದರ್ಶಿಗಳಾಗಿ ಭರತ್ ಶೆಟ್ಟಿ ಬೆಳುವಾಯಿ,ಪುರುಷೋತ್ತಮ್ ಶೆಟ್ಟಿಗಾರ್ ಹಾಗೂ ಕಾರ್ಯದರ್ಶಿಗಳಾಗಿ ಗೌತಮ್ ರೈ ಪುನಾರಯ್ಕೆಯಾಗಿದ್ದಾರೆ. ನೂತನ ಕಾರ್ಯದರ್ಶಿಗಳಾಗಿ ನಾಗೇಶ್ ಪ್ರಭು ಮೂಡಬಿದಿರೆ, ಸಂವಿತ್ ನಾಯರ್ ಕಿನ್ನಿಗೋಳಿ ಹಾಗೂ ರೋಷನ್ ಶೆಟ್ಟಿ ಬೆಳುವಾಯಿ ಆಯ್ಕೆಯಾಗಿದ್ದಾರೆ. ಮಂಡಲದ ಕೋಶಾಧಿಕಾರಿಯಾಗಿ ಗಣೇಶ್ ನೆಲ್ಲಿಕಾರ್ ಅವರನ್ನು ನೇಮಿಸಲಾಗಿದೆ. ನೂತನ ಪದಾಧಿಕಾರಿಗಳಿಗೆ ಪಕ್ಷದ ಪ್ರಮುಖರು ಆಭಿನಂದಿಸಿದ್ದಾರೆ.