ಮೂಡುಬಿದಿರೆ: ಲಾಡಿ ಹಜಂಕಾಲಬೆಟ್ಟ ಕ್ಷೇತ್ರದ ವರ್ಷಾವಧಿ ಜಾತ್ರ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಐವರು ಮಾಯಾಗಾರರ ಅತಿಶಯ ಕ್ಷೇತ್ರವೆಂದೇ ಖ್ಯಾತಿ ಪಡೆದಿರುವ ಈ ಕ್ಷೇತ್ರದ ವೈಭವದ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಜನರು ಭಾಗಿಯಾಗಿ ದೈವ-ದೇವರುಗಳ ಕೃಪೆಗೆ ಪಾತ್ರರಾದರು.
ಜಾತ್ರೆಗೆ ಸೇರಿದ್ದ ಸಾವಿರಾರು ಜನರು ಭಕ್ತರಿಗೆ ಉಚಿತ ಪಾನಕ ಸೇವೆಯನ್ನು ಬ್ರದರ್ಸ್ ಫಾಸ್ಟ್ ಪುಡ್ ನ ಮಾಲಕರಾದ ಚಂದ್ರಶೇಖರ್ ಹಾಗೂ ಶಿವಪ್ರಸಾದ್ ಒದಗಿಸಿದ್ದರು. ಸ್ವಚ್ಚ ಪರಿಸರ ಹಾಗೂ ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಈ ಪಾನಕವನ್ನು ಸ್ಟಿಲ್ ಲೋಟದಲ್ಲಿ ವಿತರಿಸಲಾಯಿತು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸೇವೆಯನ್ನು ನೀಡುವುದರ ಜೊತೆಗೆ ಪರಿಸರ ಸ್ನೇಹಿಯಾದ ರೀತಿಯಲ್ಲಿ ಅದನ್ನು ಒದಗಿಸುವುದು ಉತ್ತಮವಾದ ಯೋಚನೆ ಹಾಗೂ ಯೋಜನೆ.