ಮೂಡುಬಿದಿರೆ: ಚೌಟ ರಾಣಿ ಅಬ್ಬಕ್ಕಳ ೫೦೦ನೇ ಜನ್ಮಶತಾಭ್ದಿಯ ವರ್ಷಾಚರಣೆಯ ಪ್ರಯುಕ್ತ ಜವನೆರ್ ಬೆದ್ರ ಫೌಂಡೇಶನ್(ರಿ.) ಸಂಘಟನೆಯಿಂದ ೫೦ ವನಿತೆಯರಿಗೆ 'ಚೌಟ ರಾಣಿ ಅಬ್ಬಕ್ಕ' ಪ್ರೇರಣಾ ಪತ್ರ ಗೌರವ ನೀಡಿ ಪುರಸ್ಕಾರಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಅಬ್ಬಕ್ಕ ಪ್ರೇರಣಾ ಪತ್ರವನ್ನು ಚೌಟ ರಾಣಿ ಅಬ್ಬಕ್ಕ ಕಿರು ಉದ್ಯಾನವನದಲ್ಲಿ ಭಾನುವಾರ ವಿತರಿಸಲಾಯಿತು. ಸಾಧಕಿಯರಿಗೆ ಅಬ್ಬಕ್ಕ ಪ್ರೇರಣಾ ಪತ್ರವನ್ನು ಚೌಟ ಅರಮನೆಯ ಕುಲದೀಪ್ ಎಂ ಪ್ರಧಾನ ಮಾಡಿದರು.
೫೦೦ ಜನ ಮಹಿಳಾ ಸಾಧಕಿಯರಿಗೆ ಅಬ್ಬಕ್ಕ ಪ್ರೇರಣಾ ಪತ್ರವನ್ನು ನೀಡಲಿದ್ದು ಈಗಾಗಲೇ ಮೊದಲ ಹಂತದಲ್ಲಿ ೫೦ ಮಹಿಳಾ ಸಾಧಕಿಯರಿಗೆ ಈ ಗೌರವ ನೀಡಿ ಪುರಸ್ಕಾರಿಸಲಾಗಿದೆ. ಇಂದು ಎರಡನೇ ಹಂತದಲ್ಲಿ ೫೦ ಮಹಿಳಾ ಮಣಿಗಳಿಗೆ ಪ್ರೇರಣಾ ಪತ್ರವನ್ನು ನೀಡಲಾಗಿದ್ದು. ಮುಂದಿನ ದಿನಗಳಲ್ಲಿ ಮೂರನೇ ಹಂತದ ಐವತ್ತು ಮಹಿಳಾ ಸಾಧಕಿಯರನ್ನು ಆಯ್ಕೆ ಮಾಡಿ ಪ್ರೇರಣಾ ಪತ್ರ ನೀಡಿ ಗೌರವಿಸಲಾಗುತ್ತದೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ.
ಚೌಟ ಅರಮನೆಯ ಮುಂಭಾಗದಲ್ಲಿರುವ ಚೌಟ ರಾಣಿ ಅಬ್ಬಕ್ಕ ಕಿರು ಉದ್ಯಾನವನದಲ್ಲಿ ಈ ಕಾರ್ಯಕ್ರಮ ನಡೆಯಿತು. ಜವನೆರ್ ಬೆದ್ರ ಫೌಂಡೇಶನ್(ರಿ.) ಸಂಸ್ಥಾಪಕ ಅಮರ್ ಕೋಟೆ, ಕಾರ್ಯದರ್ಶಿ ದಿನೇಶ್ ನಾಯಕ್, ಕಾರ್ಯಕ್ರಮ ಸಂಯೋಜಕರಾದ ಸುನೀತಾ ಉದಯ್ ಕುಮಾರ್, ಅಬ್ಬಕ್ಕ ಬ್ರಿಗೇಡ್ ಸಂಚಾಲಕಿ ಸಹಾನ ನಾಯಕ್, ಅಬ್ಬಕ್ಕ ಬ್ರಿಗೇಡ್ ನ ಸದಸ್ಯರಾದ ಸೌಮ್ಯ, ವಿದ್ಯಾ ಹಾಗೂ ಜವನೆರ್ ಬೆದ್ರ ಸಂಘಟನೆಯ ಸದಸ್ಯರಾದ ಶಮಿತ್ ರಾವ್, ಗಣೇಶ್ ಪೈ, ಮನು ಒಂಟಿಕಟ್ಟೆ, ಸುಮಂತ್ ಶೆಟ್ಟಿ, ಅರುಣ್, ಪ್ರತೀಶ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸಂದೀಪ್ ಕೆಲ್ಲಪುತ್ತಿಗೆ ನಿರ್ವಹಿಸಿದರು.