ಕಂಬಳದ 'ಭೀಷ್ಮ'ರಿಗೆ ಸಾರ್ವಜನಿಕವಾಗಿ ಅಪಮಾನ; ರಾಜಿ ಸಂಧಾನದ ಮೂಲಕ ಗೊಂದಲಕ್ಕೆ ತೆರೆ ಎಳೆದ ಪ್ರಮುಖರು.?


ಮೂಡುಬಿದಿರೆ: ಕ್ಯಾ. ಬ್ರಿಜೇಶ್ ಚೌಟ ನೇತೃತ್ವದ ಮಂಗಳೂರು ಕಂಬಳದಲ್ಲಿ ಕಂಬಳದ ಭೀಷ್ಮ ಎಂದೇ ಖ್ಯಾತಿ ಪಡೆದಿರುವ ಗುಣಪಾಲ್ ಕಡಂಬರಿಗೆ ಸಾರ್ವಜನಿಕವಾಗಿ ಅಪಮಾನ ನಡೆದ ಘಟನೆ ಕಂಬಳದ ಆಭಿಮಾನಿಗಳಲ್ಲಿ ಹಾಗೂ ಕರಾವಳಿ ಜನತೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು ಸದ್ಯ ಈ ಗೊಂದಲಕ್ಕೆ ರಾಜಿ ಸಂಧಾನದ ಮೂಲಕ ತೆರೆ ಎಳೆಯಲಾಗಿದೆ ಎಂದು ವರದಿಯಾಗಿದೆ.

ಖಾಸಗೀ ವ್ಯಕ್ತಿಯೊಬ್ಬರ ಮನೆಯಲ್ಲಿ ನಡೆದ ಸಭೆಯಲ್ಲಿ ಕೊಲಚ್ಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿ ಮಧ್ಯಸ್ಥಿಕೆಯಲ್ಲಿ ಈ ಸಂಧಾನ ನಡೆದಿದ್ದು, ಈ ಸಭೆಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕಂಬಳದ ಭೀಷ್ಮ ಗುಣಪಾಲ್ ಕಡಂಬ, ಅರುಣ್ ಶೆಟ್ಟಿ, ಹರ್ಷವರ್ಧನ್ ಪಾಡಿವಾಲ್, ರಶ್ಮಿತ್ ಶೆಟ್ಟಿ, ಶಕ್ತಿಪ್ರಸಾದ್ ಶೆಟ್ಟಿ, ಮಾಣಿ ಉಮೇಶ್ ಶೆಟ್ಟಿ, ಶಾಂತಿಪ್ರಸಾದ್ ಹೆಗ್ಡೆ, joylus ಡಿಸೋಜ ಮುಂತಾದವರು ಈ ಸಂಧಾನ ಸಭೆಯಲ್ಲಿ ಭಾಗಿಯಾಗಿದ್ದರು. ವಿಯ್ಯಾರು ಕಂಬಳದಲ್ಲಿ ಬಹಿರಂಗವಾಗಿ ಕ್ಷಮೆ ಕೇಳುವ ಮೂಲಕ ಇದಕ್ಕೆ ಸಂಪೂರ್ಣ ಇತಿಶ್ರೀ ಆಡಲಿದ್ದಾರೆ ಎಂದು ಕಂಬಳ ಪ್ರಮುಖರು ಕದಂಬ ಮೀಡಿಯಾಕ್ಕೆ ತಿಳಿಸಿದ್ದಾರೆ.