ಮೂಡುಬಿದ್ರೆ: ದಕ್ಷಿಣ ಕನ್ನಡ ಜಿಲ್ಲೆಯ ಅತೀ ದೊಡ್ಡ MotoSports ರ್ಯಾಲಿ ಯಶಸ್ವಿಯಾಗಿ ಸಂಪನ್ನಗೊಂಡಿತು. ಜನವರಿ ೩ ಹಾಗೂ ೪ ರಂದ ಪಂಚರತ್ನ ಮೈದಾನದಲ್ಲಿ ನಡೆದ ರಾಷ್ಟ್ರಮಟ್ಟದ ರ್ಯಾಲಿ ನೂರಾರು ಸ್ವರ್ಧಿಗಳ ಭಾಗವಹಿಸುವಿಕೆಯ ಮೂಲಕ ಅಧ್ಬುತವಾದ ಯಶಸ್ಸಿನೊಂದಿಗೆ ಮುಕ್ತಾಯಗೊಂಡಿತು.
ಮುಷಾ ಶರೀಫ್, ಆಶ್ವಿನ್ ನಾಯಕ್ ಹಾಗೂ ಇನ್ನಿತರ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ರ್ಯಾಲಿಯಲ್ಲಿ ಭಾಗವಹಿಸಿದ ಪರಿಣಿತರ ಮಾರ್ಗದರ್ಶನದಲ್ಲಿ ಈ ರ್ಯಾಲಿಯನ್ನು ನಡೆಸಲಾಯಿತು. ಬೆದ್ರ ಆಡ್ವೇಂಚರ್ಸ್ ಕ್ಲಬ್', TASC, IMSC, FMSCI ನೇತೃತ್ವದಲ್ಲಿ ಮೋಟೋ ಸ್ಪೋರ್ಟ್ ರ್ಯಾಲಿಯನ್ನು ನಡೆಸಲಾಯಿತು.
'AutoX2026' ರ್ಯಾಲಿಗೆ ಜನವರಿ ೪ರ ಬೆಳಿಗ್ಗೆ ೯ ಗಂಟೆಗೆ ಶಾಸಕ ಉಮನಾಥ್ ಕೋಟ್ಯಾನ್, ಯುವ ನಾಯಕ ಮಿಥುನ್ ರೈ, ಪಂಚರತ್ನ ಗ್ರೌಂಡ್ಸ್ ಮಾಲಕಾರದ ತಿಮ್ಮಯ್ಯ ಶೆಟ್ಟಿ, ಕುಲದೀಪ್ ಎಂ ಚಾಲನೆ ನೀಡಿದರು. ಉದ್ಯಮಿ ಶ್ರೀಪತಿ ಭಟ್, ವಕೀಲರಾದ ಬಾಹುಬಲಿ ಪ್ರಸಾದ್, ಪುರಸಭೆ ಸದಸ್ಯರಾದ ಸುರೇಶ್ ಕೋಟ್ಯಾನ್, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರಾದ ಕೃಷ್ಣರಾಜ್ ಹೆಗ್ಡೆ, ಅಬು ಹಾಲ ಪುತ್ತಿಗೆ, ಇಮ್ರಾನ್ ಆಹಮದ್, ಸಿ.ಎಚ್ ಘಫುರ್ ಹಾಗೂ ಮತ್ತಿತರ ಗಣ್ಯರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
ಮೋಟೋ ಸ್ಪೋರ್ಟ್ಸ್ ಸ್ಪರ್ಧೆಯ ಆಯೋಜಕರಾದ ಅಕ್ಷಯ್ ಕೆ ಜೈನ್ ರ್ಯಾಲಿಯ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡಿದ್ದರು. ಸ್ಥಳೀಯ ಹಾಗೂ ಇತರ ಊರುಗಳಿ ಬಂದ ಸಾವಿರಾರು ಪ್ರೇಕ್ಷಕರು ವಿವಿಧ ವಿಭಾಗದ ಮೋಟೋ ಸ್ಪೋರ್ಟ್ ರ್ಯಾಲಿಯ ಅಬ್ಬರವನ್ನು ಕಣ್ತುಂಬಿಕೊಂಡರು. BAC< TASC, IMSC, FMSCI ಎಲ್ಲಾ ಸದಸ್ಯರು ರ್ಯಾಲಿಯನ್ನು ಯಶಸ್ವಿಯಾಗಿ ಸಂಪನ್ನಗೊಳಿಸಲು ಸಹಕಾರಿಸಿದರು.
ಬೆದ್ರದ ಕದಂಬ ಮೀಡಿಯಾ ನ್ಯೂಸ್ ಪಾರ್ಟ್ನರ್ ಆಗಿ ಕಾರ್ಯನಿರ್ವಹಿಸಿತು. ವಿವಿಧ ಸುತ್ತುಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿಜೇತ ಪಟ್ಟಿ ಈ ರೀತಿ ಇದೆ.