ಗುಣಪಾಲ ಕಡಂಬರ ಅಭಿಮಾನಿಗಳ ಸಭೆ: ಕಠಿಣ ಕ್ರಮ ತೆಗೆದುಕೊಳ್ಳಲು ಆಗ್ರಹ.? ಕ್ರಮ ತೆಗೆದುಕೊಳ್ಳದಿದ್ದಲ್ಲಿ ಮುಂದಿನ ನಿರ್ಧಾರದ ಎಚ್ಚರಿಕೆ.?


ಮೂಡುಬಿದ್ರೆ: ಕಂಬಳ ಕ್ಷೇತ್ರದಲ್ಲಿ ಸುಮಾರು ೫೫ ವರ್ಷಗಳ ಸೇವೆ ಸಲ್ಲಿಸಿ ಸುಧೀರ್ಘ ಅನುಭವ ಪಡೆದು ಕಂಬಳದ ಭೀಷ್ಮ ಎಂದೇ ಖ್ಯಾತಿ ಪಡೆದಿರುವ ಗುಣಪಾಲ್ ಕಡಂಬರಿಗೆ ಮಂಗಳೂರು ಕಂಬಳದಲ್ಲಿ ಸಾರ್ವಜನಿಕವಾಗಿ ಮಾಡಿದ ಅವಮಾನವನ್ನು ಖಂಡಿಸಿ ಗುಣಪಾಲ್ ಕಡಂಬರ ಅಭಿಮಾನಿಗಳು ಇಂದು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಸಭೆಯನ್ನು ನಡೆಸಿ ಎರಡು ಪ್ರಮುಖ ನಿರ್ಣಾಯಗಳನ್ನು ಕಂಬಳ ಸಮಿತಿ ತೆಗೆದುಕೊಳ್ಳಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ನೂರಾರು ಅಭಿಮಾನಿಗಳ ಜೊತೆಗೆ ಜಿಲ್ಲೆಯ ಇತರ ಭಾಗಗಳ ಕಂಬಳ ಸಂಘಟನೆ ಪ್ರಮುಖರು ಹಾಗೂ ಆಯೋಜಕರು ಭಾಗಿಯಾಗಿದ್ದ ಈ ಸಭೆಯಲ್ಲಿ ಕಂಬಳದ ಭೀಷ್ಮರಿಗೆ ಸಾರ್ವಜನಿಕವಾಗಿ ಅವಮಾನ ಮಾಡಿದ ಅರುಣ್ ಶೆಟ್ಟಿ ಹಾಗೂ ಮುಚ್ಚೂರು ಲೋಕೆಶ್ ೦೩-೦೧-೨೦೨೫ರಂದು ಮಿಯ್ಯಾರಿನಲ್ಲಿ ನಡೆಯುವ ಕಂಬಳದಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಹಾಗೂ ರಾಜ್ಯ ಹಾಗೂ ಜಿಲ್ಲಾ ಸಮಿತಿ ಪಧಾದಿಕಾರಿಯಾಗಿ ಪದೇ ಪದೇ ಈ ರೀತಿಯ ತಪ್ಪು ಮಾಡುತ್ತಿರುವ ಮುಚ್ಚೂರ್ ಲೋಕೆಶ್ ಅವರನ್ನು ೨ ಸಮಿತಿಯಿಂದಲು ಶಿಸ್ತು ಕ್ರಮದ ಆಡಿಯಲ್ಲಿ ವಜಾ ಮಾಡಬೇಕು ಎಂಬ ಒಕ್ಕೋರಲಲ್ಲಿ ನಿರ್ಣಯಿಸಿ ಕಂಬಳ ಸಮಿತಿ ಈ ಎರಡು ಕ್ರಮಗಳನ್ನು ಕೈಗೊಳ್ಳಲು ಒತ್ತಾಯಿಸಿದೆ.

ಕಂಬಳ ಸಮಿತಿ ಈ ಕ್ರಮವನ್ನು ಕೈಗೊಳ್ಳಲು ವಿಫಲವಾದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟ ಸಭೆಯನ್ನು ನಡೆಸಿ ನಮ್ಮ ನಿರ್ಧಾರವನ್ನು ಮುಂದಿನ ಪ್ರಕಟಿಸಲಾಗುವುದು ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಒಟ್ಟಾರೆಯಾಗಿ ಈ ಎಲ್ಲಾ ಬೆಳವಣಿಗೆಗಳು ಕಂಬಳದಲ್ಲಿ ಒಂದು ರೀತಿಯ ಕಾರ್ಮೋಡ ಕವಿದಿದ್ದು ಇದು ಅದಷ್ಟು ಬೇಗ ಸರಿಯಾಗಿ ಕಂಬಳ ಇನ್ನಷ್ಟು ಬೆಳಗಲಿ ಎಂಬುದು ಅಸಂಖ್ಯಾತ ಕಂಬಳ ಅಭಿಮಾನಿಗಳ ಕೋರಿಕೆ.