ಮೂಡುಬಿದಿರೆ: ಸಂತ್ರಸ್ಥರನ್ನು ಗುರುತಿಸಿ ಗೌರವ ನೀಡಿದ `ಯಶಕರ್ನಾಟಕ'


ಮೂಡುಬಿದಿರೆ: ಉಡುಪಿ ಹಾಗೂ ಕಾಸರಗೋಡು 400ಕೆ.ವಿ. ಪವರ್ ಲೈನ್‌ಗಾಗಿ ಭೂಮಿ ನೀಡಿದ ಸಂತ್ರಸ್ಥರನ್ನು ಗುರುತಿಸಿ ಗೌರವಿಸಿದ ವಿನೂತನ ಹಾಗೂ ವಿಶೇಷ ಕಾರ್ಯಕ್ರಮ ಗಣರಾಜ್ಯೋತ್ಸವದ ದಿನದಂದು ಮೂಡುಬಿದಿರೆಯಲ್ಲಿ ನಡೆಯಿತು. ವರ್ಷ ಕ್ರಿಯೇಷನ್ಸ್ ನೇತೃತ್ವದ `ಯಶಕರ್ನಾಟಕ' ಸಮೂಹ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. 

`ವನ್ ಗ್ರಿಡ್ ವನ್ ನೇಷನ್' ಎಂಬ ಕೇಂದ್ರ ಸರಕಾರದ ಪ್ರಾಯೋಜಿತ ಯೋಜನೆ ಇದಾಗಿದ್ದು, ತಲತಲಾಂತರಗಳಿಂದ ಕೃಷಿ ಮಾಡುತ್ತಾ, ಭೂಮಿಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದರೂ, ಯೋಜನೆಯ ಅನುಷ್ಠಾನಕ್ಕಾಗಿ ಭೂಮಿ ನೀಡುವ ಮೂಲಕ ಮಾದರಿಯಾದವರನ್ನು ಗುರುತಿಸಿ ಗೌರವಿಸುವ ಮೂಲಕ ಸನ್ಮಾನಿಸುವ ಕಾರ್ಯವನ್ನು "ಯಶಕರ್ನಾಟಕ" ಮಾಡಿದೆ.

ಕೃಷಿಕರ ನೋವು-ನಲಿವು, ಕಷ್ಟ-ಸುಖಗಳ ಜೊತೆಗೆ ಕೃಷಿಕರ  ಮುಂದಿರುವ ಸವಾಲುಗಳ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಲಾಯಿತು. ಜೊತೆಗೆ ಅನುಭವಿ ಕೃಷಿಕರೊಂದಿಗೆ ನೇರ ಸಂವಾದ ಕಾರ್ಯಕ್ರಮವೂ ಅತ್ಯಂತ ಪರಿಣಾಮಕಾರಿಯಾಗಿ ನಡೆಯಿತು. 

ವರ್ಷ ಕ್ರಿಯೇಷನ್ಸ್ ನೇತೃತ್ವದ `ಯಶಕರ್ನಾಟಕ' ಸಮೂಹ ಏರ್ಪಡಿಸಿದ ಈ ವಿನೂತನ ಕಾರ್ಯಕ್ರಮಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ರೀತಿಯ ವಿನೂತನ ಹಾಗೂ ವಿಭಿನ್ನ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಕೃಷಿಕರು, ಸಂತ್ರಸ್ಥರು,ಹೋರಾಟಗಾರರು ಹಾಗೂ ಊರ ಗಣ್ಯರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮವೂ ಒಂದು ಹೊಸ ಪ್ರಯತ್ನವಾಗಿದೆ ಎಂದು ಆನೇಕರು ಪ್ರಶಂಸಿಸಿದ್ದಾರೆ..