ಬಾರಮತಿ ವಿಮಾನ ದುರಂತದ ಬೆನ್ನಲ್ಲೇ ಮತ್ತೊಂದು ವಿಮಾನ ಪತನ ಸಂಸದ ಸೇರಿ 15 ಜನರ ಸಾವು.?


ಅಮೇರಿಕಾ: ಮಹಾರಾಷ್ಟ್ರದ ಬಾರಮತಿಯ ವಿಮಾನದ ದುರಂತ ಬೆನ್ನಲ್ಲೇ ಮತ್ತೊಂದು ವಿಮಾನ ಪತನವಾದ ಬಗೆಗೆ ವರದಿಯಾಗಿದೆ. ಅಮೇರಿಕಾದ ಕೊಲಂಬಿಯಾದಲ್ಲಿ ನಾಗರೀಕ ವಿಮಾನವೊಂದು ಪತನವಾಗಿದ್ದು ಸುಮಾರು ೧೫ ಜನರು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. 13 ಜನರು ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿಗಳನ್ನು ಹೊತ್ತೊಯ್ಯುತ್ತಿದ ಈ ವಿಮಾನದ ಗುಡ್ಡಗಾಡು ಪ್ರದೇಶದಲ್ಲಿ ಪತನವಾಗಿದೆ. ಈ ವಿಮಾನ ಪತನಕ್ಕೂ ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ

೧೩ ಜನರ ಪ್ರಯಾಣಿಕರ ಪೈಕಿ ಕೊಲಂಬಿಯಾ ಸಂಸತ್ತಿನ ಒರ್ವ ಸಂಸದರೂ ಕೂಡ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ. ಸ್ಥಳೀಯ ಸುದ್ದಿ ಮಾಧ್ಯಮಗಳ ವರದಿಯ ಪ್ರಕಾರ ೧೫ ಜನರ ಪೈಕಿ ಯಾರೊಬ್ಬರೂ ಕೂಡ ಬದುಕುಳಿದಿಲ್ಲ ಎನ್ನಲಾಗಿದೆ. ವಿಮಾನ ಲ್ಯಾಂಡ್ ಆಗುವ ೧೧ ನಿಮಿಷಗಳ ಮೊದಲೇ ಸಂಪರ್ಕ ಕಡಿತಗೊಂಡಿದ್ದು ಆ ಬಳಿಕ ಪತನವಾಗಿದೆ ಎಂದು ಪ್ರಾರ್ಥಮಿಕ ವರದಿಯಲ್ಲಿ ಬಹಿರಂಗವಾಗಿದೆ.

ವಿಮಾನ ಪ್ರಯಾಣ ಅತ್ಯಂತ ಸುರಕ್ಷಿತ ಪ್ರಯಾಣಗಳಲ್ಲಿ ಒಂದು ಎಂದು ಕರೆಯಲಾಗುತ್ತೆಯಾದರು ಈ ರೀತಿಯ ಅಪಘಾತಗಳು ಅದಂತಹ ಸಂಧರ್ಭದಲ್ಲಿ ಯಾವೊಬ್ಬ ಪ್ರಯಾಣಿಕರು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ.