ಓಂಕಾರ್ ಪೂಜಾರಿಯವರ ಉಳಿವಿಗಾಗಿ ಪ್ರಾರ್ಥಿಸಿ; ತಾಯಿ ಭಾರತ ಮಾತೆಯ ಸೇವೆ ಮಾಡುವಂತಾಗಲಿ


"ತಾಯಿ ಭಾರತಾಂಬೆಯ ಸೇವೆ ನನ್ನ ಗುರಿ" ಎಂದು ಸದಾ ಭಾರತೀಯ ಸೇನೆಗೆ ಸೇರಬೇಕೆಂದು ಕನಸ ಹೊತ್ತ ಮೂಡುಬಿದಿರೆಯ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿ ಓಂಕಾರ್ ಪೂಜಾರಿ ಇವರು ತನಗೆ ಹೊಟ್ಟೆ ನೋವು ಎಂದು ಜನವರಿ 4 ನೇ ತಾರೀಕಿನಂದು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.ತನ್ನ ಹೆಚ್ಚಿನ ಚಿಕಿತ್ಸೆಗಾಗಿ ಗುರುವಾರ ಮಧ್ಯಾಹ್ನ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲುಗೊಂಡಿದ್ದಾನೆ.

ವೈದ್ಯರು ಇವನ ಲೀವರ್  ಸಂಪೂರ್ಣ ವೈಫಲ್ಯಗೊಂಡಿದೆ ಕಾರಣವೇನೆಂದು ತಿಳಿದುಬಂದಿಲ್ಲ ಎಂದು ತಿಳಿಸಿರುತ್ತಾರೆ. ಇಂದು ಮುಂಜಾನೆ ಆರೋಗ್ಯ ಸಲ್ಪ ಚೇತರಿಕೆಗೊಂಡಿದ್ದು ಸಾವು-ನೋವಿನಿಂದ ಬದುಕಿಗಾಗಿ ಹೋರಾಡುತ್ತಿದ್ದಾನೆ. ಈತನು ವೆಂಟಿಲೇಟರ್ ಸಹಾಯದಲ್ಲಿದ್ದು ಮುಂದಿನ 3 ದಿನಗಳ ಕಾಲ ಪ್ಲಾಸ್ಮಾ ಚಿಕಿತ್ಸೆಯಿಂದ ಚೇತರಿಸಿಕೊಳ್ಳಬಹುದು ಎಂದು  ವೈದ್ಯರು ತಿಳಿಸಿರುತ್ತಾರೆ .ಇವರ ಚಿಕಿತ್ಸೆ ಫಲಕಾರಿಯಾಗಿ ಆದಷ್ಟು ಬೇಗ ಗುಣಮುಖರಾಗಿ ತನ್ನ ಜೀವನದ ಉದ್ದೇಶದಂತೆ ಭೂ ಸೇನೆಯಲ್ಲಿ ಕಾರ್ಯನಿರ್ವಹಿಸುವಂತಾಗಲಿ ಎಂದು ನಾವೆಲ್ಲರೂ ಪಾರ್ಥಿಸೋಣ.