ಜನವರಿ 12 ಸನಾತನಿಗಳಿಗೆ ಅತ್ಯಂತ ಮಹತ್ವದ ದಿನ. ಹಿಂದೂ ಧರ್ಮದ ಶಕ್ತಿ ಏನು ಎಂಬುದನ್ನು ಜಗತ್ತಿಗೆ ತೋರಿಸಿದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರು ಜನಿಸಿದ ಪುಣ್ಯ ದಿನವಿದು.
ಈ ದಿನದಂದು ಮೂಡುಬಿದಿರೆಯಲ್ಲಿ ಜವನೆರ್ ಬೆದ್ರ ಸಂಘಟನೆ ಆರಂಭವಾಯಿತು. ಕೆಲವೇ ಕೆಲವು ಯುವಕರ ಜೋಡಿಸಿ ಅಮರ್ ಕೋಟೆ ಯವರು ಸಂಘಟನೆಯನ್ನು ಸ್ಥಾಪಿಸಿದರು ಆ ಬಳಿಕ ಮಾಡಿದ ಸಮಾಜಮುಖಿ ಕೆಲಸ ಇಂದು ಇತಿಹಾಸ.
ಸ್ವಚ್ಚತೆ, ಆರೋಗ್ಯ, ಇತಿಹಾಸ, ಧಾರ್ಮಿಕ ಕ್ಷೇತ್ರದಲ್ಲಿ ನೂರಾರು ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಜನತೆಯ ಬೆಂಬಲ ಪಡೆಯುವುದರ ಜೊತೆಗೆ ಒಂದು ಸ್ವಾಸ್ಥ್ಯ ಹಾಗೂ ಸುಂದರ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಶ್ರಮ ವಹಿಸಿದೆ.
ಮೂಡುಬಿದಿರೆಯ ಮಣ್ಣಿನ ಮಗಳು ರಾಣಿ ಅಬ್ಬಕ್ಕ ಅಭಿಯಾನ, ರಕ್ತ ನಿಧಿ, ಕ್ಲಿನ್ ಅಪ್ ಮೂಡುಬಿದಿರೆ 108 ವಾರಗಳ ನಿರಂತರ ಸ್ವಚ್ಛತಾ ಅಭಿಯಾನ ಕೃಷ್ಣೋತ್ಸವ ಮೂಲಕ ಜನತೆಯ ಮೆಚ್ಚುಗೆಗೆ ಪಾತ್ರವಾಯಿತು.
ಪ್ರಸ್ತುತ ಜವನೆರ್ ಬೆದ್ರ ಫೌಂಡೇಶನ (ರಿ.) ಅಮರಕೋಟೆ(ಸಂಸ್ಥಾಪಕರು/ಅಧ್ಯಕ್ಷರು), ದಿನೇಶ್ ನಾಯಕ್(ಪ್ರ ಕಾರ್ಯದರ್ಶಿ), ನಾರಾಯಣ ಪಡುಮಲೆ (ಉಪಾಧ್ಯಕ್ಷರು), ರಾಜೇಶ್ ಕೋಟೆಗಾರ್ (ಗೌರವ ಮಾರ್ಗದರ್ಶಕರು) ರಂಜಿತ್ ಶೆಟ್ಟಿ ಒಳಗೊಂಡ ಟ್ರಸ್ಟ್ ಮಾತೃ ಸಂಸ್ಥೆಯಾಗಿ ದುಡಿಯುತ್ತಿದ್ದು
1.ಯುವ ಸಂಘಟನೆ
ಸಂಚಾಲಕ ರಂಜಿತ್ ಶೆಟ್ಟಿ, ಕಾರ್ಯದರ್ಶಿ ಸಂದೀಪ್ ಕೆಲ್ಲಪುತ್ತಿಗೆ
2.ಅಬ್ಬಕ್ಕ ಬ್ರಿಗೇಡ್ (ಮಹಿಳಾ ಘಟಕ)
ಸಂಚಾಲಕಿ ಸಹನಾ ನಾಯಕ್, ಸಹ ಸಂಚಾಲಕಿ ಸುನಿತಾ ಉದಯ್
3.ರಕ್ತ ನಿಧಿ ಸಂಯೋಜಕರು ಮನು ಒಂಟಿ ಕಟ್ಟೆ , ರಂಜು ಮಿಜಾರು
4. ಭಕುತಿ ಭಜನ ಸಂಯೋಜಕರು ಪ್ರಥಮ್ ಎಸ್ ಬನ್ನಡ್ಕ
