ಮಂಗಳೂರು: ಕಂಬಳದ ಭೀಷ್ಮ ಹಾಗೂ ಅಧುನಿಕ ಕಂಬಳದ ನಡೆದಾಡುವ ವಿಶ್ವಕೋಶ ಎಂದು ಕರೆಯಲ್ಪಡುವ ಗುಣಪಾಲ್ ಕಡಂಬರಿಗೆ ಮಂಗಳೂರು ಕಂಬಳ ವೇದಿಕೆಯಲ್ಲಿ ಅವಮಾನ ಮಾಡಲಾಗಿದೆ. ಅರುಣ್ ಶೆಟ್ಟಿ ಎನ್ನುವವ ನೀವೂ ಸ್ವಲ್ಪ ಸುಮ್ಮನೆ ಕುಳಿತುಕೊಳ್ಳಿ ಎಂದು ಏರು ಧ್ವನಿಯಲ್ಲಿ ಮೈಕ್ ನಲ್ಲಿ ಮಾತನಾಡುತ್ತಾನೆ. ಇದಕ್ಕೆ ಪ್ರತಿಕ್ರಿಯಿಸಿದೆ ಕಡಂಬರು ನಾವು ಮೈಕ್ ಆಫ್ ಮಾಡಿ ಸುಮ್ಮನೆ ಕುಳಿತುಕೊಳ್ಳುತ್ತೇವೆ ಎಂದು ಹೇಳುತ್ತಾರೆ ಆ ಬಳಿಕೆ ಯಾರು ಅದು ಮೈಕ್ ನಲ್ಲಿ ಮಾತನಾಡಿದ್ದು ಎಂದು ಕೇಳಿದಾಗ ನಾನು ಅರುಣ್ ಶೆಟ್ಟಿ ಎಂದು ಮತ್ತೊಮ್ಮೆ ಏರು ಧ್ವನಿಯಲ್ಲಿ ಉತ್ತರಿಸುತ್ತಾನೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಕಡಂಬರ ಪರವಾದ ಪೋಸ್ಟ್ ಗಳು ಭಾರೀ ವೈರಲ್ ಆಗುತ್ತಿದೆ. ಹಾಗೂ ಕಂಬಳದ ಆಳಿವಿನಂಚಿನಲ್ಲಿರುವ ಸಂಧರ್ಭದಲ್ಲಿ ಅದರ ಉಳಿವಿಗೆ ಹೋರಾಟ ಮಾಡಿದವರಲ್ಲಿ ಪ್ರಮುಖರಾದ ಗುಣಪಾಲ್ ಕಡಂಬರಿಗೆ ಈ ರೀತಿಯಲ್ಲಿ ಅವಮಾನ ಮಾಡುವುದು ಕಂಬಳಕ್ಕೆ ಮಾಡುವ ದೊಡ್ಡ ಅಪಮಾನ ಎಂದು ಕಂಬಳ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಸರಿ ಸುಮಾರು 55 ವರ್ಷಗಳ ಸುಧೀರ್ಘ ಅನುಭವ ಹೊಂದಿರುವ ಗುಣಪಾಲ್ ಕಡಂಬರು ಕಂಬಳವನ್ನು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪುವಂತೆ ಮಾಡಿದವರಲ್ಲಿ ಪ್ರಮುಖರು. ತನ್ನ ಜೇವನವನ್ನೆ ಕಂಬಳಕ್ಕೆ ಮುಡಿಪಾಗಿಟ್ಟಿರುವ ಗುಣಪಾಲ್ ಕಡಂಬರನ್ನು ಬಿಟ್ಟು ಕಂಬಳವನ್ನು ಆಲೋಚನೆ ಮಾಡುವುದು ಕಷ್ಟ ಸಾಧ್ಯ. ಇಂತಹ ಅನುಭವಿಗಳು ಹಾಗೂ ಹಿರಿಯರಿಗೆ ಅವಮಾನ ಮಾಡುವುದು ಕಂಬಳಕ್ಕೆ ಮಾಡುವ ಅವಮಾನ ಎಂಬುದು ಜನತೆಯ ಅಭಿಪ್ರಾಯ.
ಮುಲ್ಕಿ ಅರಸು ಸೀಮೆ ಕಂಬಳ ಸಮಿತಿಯಿಂದ ಖಂಡನೆ:
ಮುಲ್ಕಿ ಅರಮನೆಯಿಂದ:
ಕಡಂಬರೇ, ನಿಮ್ಮ ಜೊತೆ ನಾವಿದ್ದೇವೆ🙏
ಕಡಂಬರು!!! ಕಂಬಳ ಕ್ಷೇತ್ರ ಕಂಡ ಒಬ್ಬ ಅದ್ಭುತ ಜ್ಞಾನವಂತರು. “ಕಂಬಳ ಭೀಷ್ಮ” ಗುಣಪಾಲ್ ಕಡಂಬರಿಗೆ ಮಂಗಳೂರು ಕಂಬಳದಲ್ಲಿ ಸಾರ್ವಜನಿಕವಾಗಿ ಮಾಡಲಾದ ಅವಮಾನವನ್ನು ಮುಲ್ಕಿ ಅರಸು ಕಂಬಳ ಕಟುವಾಗಿ ಖಂಡಿಸುತ್ತದೆ. ಕಡಂಬರ ಅನುಭವದಷ್ಟು ವಯಸ್ಸಾಗದವರು, ಅವರ ಬಗ್ಗೆ ಕಟುವಾಗಿ ಮಾತಾಡಿ ಅವಮಾನಿಸಿದರೆ, ಅದನ್ನು ಒಪ್ಪಲು ಯಾರೂ ತಯಾರಿಲ್ಲ. ಮಂಗಳೂರು ಕಂಬಳ ಈ ಬಗ್ಗೆ ಅದಷ್ಟು ಬೇಗ ಕ್ರಮ ಕೈಗೊಳ್ಳಲಿ. ಇಂತಹ ಕಹಿ ಘಟನೆಗಳು ಮತ್ತೆಲ್ಲೂ ಪುನರಾವರ್ತನೆಯಾಗಲೇಬಾರದು. ನಾವು ಕಡಂಬರ ಜೊತೆ ಇದ್ದೇವೆ.
- ಮುಲ್ಕಿ ಅರಸರಾದ ದುಗ್ಗಣ್ಣ ಸಾವಂತರ ಪರವಾಗಿ,
ಗೌತಮ್ ಜೈನ್, ವ್ಯವಸ್ಥಾಪಕರು, ಮುಲ್ಕಿ ಸೀಮೆ ಅರಸು ಕಂಬಳ
ಇದೊಂದು ವ್ಯವಸ್ಥಿತ ಷಡ್ಯಂತ್ರ: ಗುಣಪಾಲ್ ಕಡಂಬ
ಮಂಗಳೂರು ಕಂಬಳದಲ್ಲಿ ನಡೆದ ಘಟನೆಯ ಬಗ್ಗೆ ಕದಂಬ ಮೀಡಿಯಾಕ್ಕೆ ಪ್ರತಿಕ್ರಿಯಿಸಿದ ಗುಣಪಾಲ್ ಕಡಂಬರು ಇದೊಂದು ವ್ಯವಸ್ಥಿತ ಷಡ್ಯಂತ್ರ, ಕಂಡಬರನ್ನು ಬದಿಗೆ ಕುಳ್ಳಿರಿಸುವ ಪ್ರಯತ್ನದ ಮತ್ತೊಂದು ಭಾಗ ಇದಾಗಿದ್ದು, ಈ ರೀತಿಯ ಆನೇಕ ಘಟನೆಗಳು ಈ ಹಿಂದೆಯೂ ನಡೆದಿದ್ದು ಇದನ್ನು ಸಂಪೂರ್ಣವಾಗಿ ಜನತೆಯ ಮಡಿಲಿಗೆ ಬಿಟ್ಟಿದ್ದೇನೆ ಎಂದು ಪ್ರತಿಕ್ರಿಯಿಸಿದರು.