ಮೂಡುಬಿದಿರೆ ಭೀಕರ ರಸ್ತೆ ಅಪಘಾತ, ಕಾರು ಢಿಕ್ಕಿ ಹೊಡೆದು 7ನೇ ತರಗತಿ ವಿದ್ಯಾರ್ಥಿ ಸಾ*.!


ಮೂಡುಬಿದಿರೆ: ವಿದ್ಯಾರ್ಥಿಯೊರ್ವ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂಧರ್ಭದಲ್ಲಿ ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದ ಪರಿಣಾಮ ೭ನೇ ತರಗತಿ ವಿದ್ಯಾರ್ಥಿ ಸಾ*ವನ್ನಾಪ್ಪಿರುವ ಘಟನೆ ಬುಧವಾರ ಮಧ್ಯಾಹ್ನ ಹೊಸಂಗಡಿ ಸಮೀಪ ನಡೆದಿದೆ.


ಮಧ್ಯಾಹ್ನದ ಸಮಯ ಹೊಸಂಗಡಿಯ ಸ್ಥಳೀಯ ನಿವಾಸಿ ತನ್ನ ತಾಯಿಯೊಂದಿಗೆ ಅಂಗಡಿಗೆ ನಡೆದುಕೊಂಡು ಹೋಗುತ್ತಿದ್ದ ಸಂಧರ್ಭದಲ್ಲಿ ಕಾರು ಢಿಕ್ಕಿ ಹೊಡೆದು ವಿದ್ಯಾರ್ಥಿ ತೀವ್ರವಾಗಿ ಗಾಯಗೊಂಡು ಸಾ*ನ್ನಪ್ಪಿದ್ದಾರೆ. ನಝೀರ್ ಅವರ ಪುತ್ರ ಝಾಹಿರ್(13) ಮೃತ ದುರ್ದೈವಿಯಾಗಿದ್ದು, ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.