ಮೂಡುಬಿದಿರೆ: ಉಡುಪಿಯ ಪರ್ಯಾಯ ಶ್ರೀಪುತ್ತಿಗೆ ಮಠ ಮತ್ತು `ವಿಕಾಸ'- ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ ಆರರಂದು `ಕರಾವಳಿ ವಿಕಾಸ ಸಂಭ್ರಮ ೨೦೨೫' ಸಮಾವೇಶ ಮಧ್ಯಾಹ್ನ ೨ ಗಂಟೆಗೆ ನಡೆಯಲಿದೆ. 'ಮಾಧ್ಯಮ ಲೋಕದ ಸವಾಲುಗಳು' ಕುರಿತು ವಿಚಾರಗೋಷ್ಠಿಯಲ್ಲಿ ಮಣಿಪಾಲ್ ಮಾಹೆಯ ಪ್ರೊ. ಸತ್ಯಬೋಧ ಜೋಶಿ, ಹಿರಿಯ ಪತ್ರಕರ್ತೆ ಡಾ .ಆಶಾ ಕೃಷ್ಣಸ್ವಾಮಿ, ಉದಯವಾಣಿ ನಿವೃತ್ತ ಹಿರಿಯ ಉಪಸಂಪಾದಕ ನಿತ್ಯಾನಂದ ಎಸ್ ಪಡ್ರೆ ಭಾಗವಹಿಸಿ ವಿಚಾರ ಮಂಡಿಸುವರು. ಮಾಹೆಯ ಪತ್ರಿಕೋದ್ಯಮ ವಿಭಾಗದ ಶ್ರೀರಾಜ್ ಗುಡಿ ಕಾರ್ಯಕ್ರಮ ನಿರ್ವಹಣೆ ಮಾಡುವರು ಎಂದು ವಿಕಾಸ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.
ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿ: ಹಿರಿಯ ಪತ್ರಕರ್ತರ ಸ್ಮರಣಾರ್ಥ ನೀಡುವ `ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿ'ಗೆ ೧೦ಮಂದಿ ಸಾಧಕರು ಭಾಜನರಾಗಿದ್ದಾರೆ. ಪುತ್ತಿಗೆ ಮಠದ ಅಂತಾರಾಷ್ಟಿçÃಯ ಕಾರ್ಯದರ್ಶಿ ಪ್ರಸನ್ನಾಚಾರ್ಯ, ಉದ್ಯಮಿ ಪ್ರದೀಪ್ ಕುಮಾರ್ ಕಲ್ಕೂರ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಕೀರ್ತಿ ಶೇಷ ಪಾ.ವೆಂ ಆಚಾರ್ಯ ಸ್ಮರಣಾರ್ಥ ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿಗೆ ಕಿರಣ್ ಮಂಜನ ಬೈಲು ,ಸಂಯುಕ್ತ ಕರ್ನಾಟಕ, ಬನ್ನಂಜೆ ಗೋವಿಂದಾಚಾರ್ಯ ಸ್ಮರಣಾರ್ಥ ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿಗೆ ಡಾ .ಮಂದಾರ ರಾಜೇಶ ಭಟ್ ,ಮೂಡುಬಿದರೆ, ಬನ್ನಂಜೆ ರಾಮಾಚಾರ್ಯ ಸ್ಮರಣಾರ್ಥ ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿಗೆ ಸಾಂತೂರು ಶ್ರೀನಿವಾಸ ತಂತ್ರಿ , ದಾಮೋದರ ಕಕ್ರಣ್ಣಾಯ ಸ್ಮರಣಾರ್ಥ ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿಗೆ ಚಂದ್ರಶೇಖರ ಕುಳಮರ್ವ, ಉಪಯುಕ್ತ ನ್ಯೂಸ್,ಮಂಗಳೂರು , ಮಾಧವ ಆಚಾರ್ಯ ಸ್ಮರಣಾರ್ಥ ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿಗೆ ಆರ್ ಸಿ ಭಟ್,ಸುಳ್ಯ ,ವಿಜಯ ಕರ್ನಾಟಕ , ಸಂತೋಷ್ ಕುಮಾರ್ ಗುಲ್ವಾಡಿ ಸ್ಮರಣಾರ್ಥ ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿಗೆ ವೆಂಕಟೇಶ ಪೈ ,ಸಂಜೆ ಪ್ರಭ
ದಾಮೋದರ ಐತಾಳ ಸ್ವರಣಾರ್ಥ ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿಗೆ ಶ್ವೇತ ಇಂದಾಜೆ ,ಆಕಾಶವಾಣಿ ಮಂಗಳೂರು, ಕೊಡೆತ್ತೂರು ಅನಂತಪದ್ಮನಾಭ ಉಡುಪ ಸ್ಮರಣಾರ್ಥ ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿಗೆ ಶಾಮ್ ಹೆಬ್ಬಾರ್, ಬೆಂಗಳೂರು, ಈಶ್ವರಯ್ಯ ಅನಂತಪುರ ಸ್ಮರಣಾರ್ಥ ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿಗೆ ಶ್ರೀಕೃಷ್ಣ ಭಟ್ ಮಾಯ್ಲೆಂಗಿ ವೈದ್ಯಲೋಕ ಮತ್ತು ಹೆಲ್ತ್ ವಿಷನ್ ಹಾಗೂ ಮಂಜುನಾಥ ಭಟ್ ಸ್ಮರಣಾರ್ಥ ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿ -೨೦೨೫ಕ್ಕೆ ಹರೀಶ್ ಕೆ ಆದೂರು , ಹೊಸದಿಗಂತ ,ಮೂಡುಬಿದರೆ ಆಯ್ಕೆಯಾಗಿದ್ದಾರೆ.
'ನಮ್ಮ ಹಿರಿಯರು -ನಮ್ಮ ಹೆಮ್ಮೆ ' ವಿಭಾಗದಲ್ಲಿ ನಾಡಿನ ಹಿರಿಯ ಪತ್ರಕರ್ತರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ. ಎ ಎಸ್ ಎನ್ ಹೆಬ್ಬಾರ್ ಕುಂದಾಪುರ, ವಿಜಯಕುಮಾರ್ ಹೊಳ್ಳ ಕೋಟ ,ಜಿ ಯು ಭಟ್ ಹೊನ್ನಾವರ ,ರಾಮಕೃಷ್ಣ ಮೈರುಗ ಕಾಸರಗೋಡು ,ಗಣೇಶ್ ಪ್ರಸಾದ್ ಪಾಂಡೇಲು, ಜಿಕೆ ಭಟ್ ,ರಾಮಚಂದ್ರ ಆಚಾರ್ಯ , ಲಕ್ಷ್ಮಿ ಮಚ್ಚಿನ,ಪುರುಷೋತ್ತಮ ಭಟ್ ಕಾಸರಗೋಡು ಹಾಗೂ ಸೂರ್ಯನಾರಾಯಣ ಭಟ್ ಅವರನ್ನು ಗೌರವಿಸಲಾಗುವುದು .
ಸಮಾರೋಪ ಸಮಾರಂಭದಲ್ಲಿ ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ ಉಪಸ್ಥಿತಿಯಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯ ಯು ಎಸ್ ಶೆಣೈ , ಕೆಯುಡಬ್ಲ್ಯೂ ಜೆ ಖಜಾಂಚಿ ವಾಸುದೇವ ಹೊಳ್ಳ , ಉಡುಪಿ ಜಿಲ್ಲಾ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯ ಶ್ರೀನಿವಾಸ ನಾಯಕ ಇಂದಾಜೆ ರವರಿಗೆ ಅಭಿನಂದನೆ ಸಲ್ಲಿಸಲಾಗುವುದು.
0 Comments