ಮೂಡುಬಿದ್ರೆ: ಚೌಟ ರಾಣಿ ಅಬ್ಬಕ್ಕ ೫೦೦ನೇ ಜನ್ಮ ಶತಮಾನೋತ್ಸವದ ಪ್ರಯುಕ್ತ ವರ್ಷಪೂರ್ತಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲು ಜವನೆರ್ ಬೆದ್ರ ಸಂಘಟನೆ ತೀರ್ಮಾನಿಸಿದ್ದು ಈ ನಿಟ್ಟಿನಲ್ಲಿ ೫೦೦ ಜನ ಮಹಿಳಾ ಸಾಧಕಿಯರಿಗೆ ಅಬ್ಬಕ್ಕ ಪ್ರೇರಣಾ ಪತ್ರವನ್ನು ನೀಡಿ ಗೌರವಿಸುವ ತೀರ್ಮಾನವನ್ನು ಕೈಗೊಂಡಿದ್ದು ಈ ಮೂಲಕ ಮಹಿಳಾ ಸಾಧಕಿಯರಿಗೆ ಮತ್ತಷ್ಟು ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಇದನ್ನು ಹಂತ ಹಂತವಾಗಿ ನೀಡಲು ತೀರ್ಮಾನಿಸಿದ್ದು ಮೊದಲ ಹಂತದಲ್ಲಿ ಸುಮಾರು ೫೦ ಜನ ಮಹಿಳಾ ಸಾಧಕಿಯರ ಪಟ್ಟಿಯನ್ನು ಸಂಘಟನೆ ಬಿಡುಗಡೆ ಮಾಡಿದೆ.
ಚೌಟ ರಾಣಿ ಅಬ್ಬಕ್ಕ ಪ್ರೇರಣಾ ಪತ್ರದ ಸಮರ್ಪಣೆಯ ಗೌರವದ ಕಾರ್ಯಕ್ರಮ ಇದೇ ಡಿಸೆಂಬರ್ ೧೪ ರ ರವಿವಾರದಂದು ಅಬ್ಬಕ್ಕ ಕಿರು ಉದ್ಯಾನವನದಲ್ಲಿ ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ. ಮೊದಲ ಹಂತದ ಪಟ್ಟಿಯಲ್ಲಿ ಆಯ್ಕೆಗೊಂಡ ಸಾಧಕಿಯರ ಪಟ್ಟಿ ಈ ರೀತಿ ಇದೆ.
0 Comments