ಬೆಂಗಳೂರು: ಅ*ಚಾರ ಕೇಸ್ ನಲ್ಲಿ ಜೈಲು ಪಾಲಾಗಿ ಜನಪ್ರತಿನಿಧಿಗಳ ಕೋರ್ಟ್ ನಿಂದ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಹಾಗೂ ಶಾಸಕ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರಿಗೆ ಜಾಮೀನು ಮಂಜೂರು ಮಾಡಲು ಹೈಕೋರ್ಟ್ ನಿರಾಕರಿಸಿದೆ. ಮೂರು ಪ್ರಕರಣಗಳ ಪೈಕಿ ಒಂದು ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ರೇವಣ್ಣ ಅವರು ಸದ್ಯ ಉಳಿದ ಎರಡು ಪ್ರತ್ಯೇಕ ಪ್ರಕರಣಗಳ ತೀರ್ಪಿಗೆ ಕಾಯುತ್ತಿದ್ದು ಅದರಲ್ಲಿ ಜಾಮೀನಿಗೆ ಆರ್ಜಿ ಹಾಕಿದ್ದು ಜಾಮೀನು ನೀಡಲು ಕೋರ್ಟ್ ನಿರಾಕರಿಸುವ ಮೂಲಕ ದೊಡ್ಡ ಶಾಕ್ ನೀಡಿದೆ.
0 Comments