ಮೂಡುಬಿದ್ರೆ: ಪೆರಿಂಜೆಯ ರೋಹಿಣಿಯವರ ತಮ್ಮ ಸ್ವಂತ ಬ್ರಾಂಡ್ Roshini Home Products ಉತ್ಪನ್ನಗಳನ್ನು ವೋಕಲ್ ಟು ಗ್ಲೋಬಲ್ ಮಟ್ಟಕ್ಕೆ ತಲುಪಿಸುವಲ್ಲಿ ಯಶಸ್ಚಿಯಾಗಿದ್ದಾರೆ. ಇದರ ಮುಂದುವರಿದ ಭಾಗದಂತೆ ನವದೆಹಲಿಯಲ್ಲಿ ನಡೆಯಲಿರುವ Prestigious India International Trade Fair(IITF) ನಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
IITF ಪ್ರಪಂಚದ ಅತೀ ದೊಡ್ಡ trade fairs ಆಗಿದ್ದು ಈ trade fairs ಲಕ್ಷಾಂತಾರ ಜನರು ಭೇಟಿ ನೀಡುವುದು ಇದರ ಹೆಗ್ಗಳಿಕೆಗೆ ಮತ್ತೊಂದು ಸಾಕ್ಷಿ. ಗ್ರಾಮ ಮಟ್ಟದಲ್ಲಿ ಆರಂಭವಾದ Roshini Home Products ಉತ್ಪನ್ನಗಳು ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸುತ್ತಿರುವುದು ಭಾರೀ ಖುಷಿಯ ವಿಚಾರ ಎಂದು ರೋಹಿಣಿಯವರು ಖುಷಿ ಹಂಚಿಕೊಂಡಿದ್ದಾರೆ.
ರೋಹಿಣಿ ಯವರು ಪ್ರತಿಷ್ಠಿತ Saras Ajeevika pavilion ಗೆ ಎಂಟ್ರಿ ಪಡೆದಿರುವುದು ಅವರ products ನ quality ಮತ್ತು authenticity ಗೆ ಸಿಕ್ಕಿದ ಉತ್ತಮ ಗೌರವಾಗಿದ್ದು, ಯಶಸ್ವಿ ಉದ್ಯಮಿಯಾಗಿ ಗೌರವದ ಖ್ಯಾತಿ ಪಡೆಯುತ್ತಿರುವ ರೋಹಿಣಿಯವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದು ಅವರ ಬಂಧುಗಳ ಶುಭ ಹಾರೈಕೆ.
0 Comments