ಅಬ್ಬಕ್ಕ ಪ್ರತಿಮೆಗೆ ಗೌರವ ಸಲ್ಲಿಸಿ ಪ್ರತಿಭಾ ಕಾರಂಜಿಯ ಛದ್ಮವೇಷ ಸ್ಪರ್ಧೆಯಲ್ಲಿ ಭಾಗಿ; ದ್ವಿತೀಯ ಸ್ಥಾನ ಪಡೆದ ಬಾಲಕಿ ಸುಹಾನಿ ಪೂಜಾರಿ

ಮೂಡುಬಿದ್ರೆ: ಬೆದ್ರದ ಮಣ್ಣಿನ ಮಗಳು ವೀರ ರಾಣಿ ಅಬ್ಬಕ್ಕಳ ಹೆಸರು ದಿನದಿಂದ ದಿನಕ್ಕೆ ಖ್ಯಾತಿ ಪಡೆಯುತ್ತಿದೆ. ಅಬ್ಬಕ್ಕ ಬೆದ್ರದ ಮಣ್ಣಿನ ಮಗಳಾದರೂ ಅದೆಷ್ಟೋ ಮೂಡುಬಿದ್ರೆಯ ಪ್ರಜೆಗಳಿಗೆ ಆಕೆಯ ಬಗ್ಗೆ ತಿಳಿದಿರಲೆ ಇಲ್ಲ ಅದರೆ ಮೂಡುಬಿದ್ರೆಯ ವಿವಿಧ ಸಂಘಟನೆಗಳ ಶ್ರಮದಿಂದ ಮುಖ್ಯವಾಗಿ ಜವನೆರ್ ಬೆದ್ರ ಫೌಂಡೇಶನ್'ನ ನಿರಂತರ ಪ್ರಯತ್ನದ ಫಲವಾಗಿ ಅಬ್ಬಕ್ಕ'ಳ ಯಶೋಗಾಥೆ ಜನತೆಗೆ ಮುಟ್ಟಿಸುವ ಕಾರ್ಯ ನಡೆದಿದೆ. ವೀರ ರಾಣಿ ಅಬ್ಬಕ್ಕ'ಳ ಯಶೋಗಾಥೆಯನ್ನು ಇನ್ನಷ್ಟು ಈ ತಲೆಮಾರಿಗೆ ಪಸರಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ಇದರ ಬಗೆಗಿನ ಐತಿಹ್ಯ ತಿಳಿಸುವ ಕೆಲಸವನ್ನು ಪೋಷಕರು ಮಾಡುವುದು ಅತ್ಯಗತ್ಯವಾಗಿದೆ.

ಶಾಲೆಯಲ್ಲಿ ನಡೆಯುವ ವಿವಿಧ ಸ್ಪರ್ಧೆಗಳಲ್ಲಿ ಅಬ್ಬಕ್ಕ'ಳ ಸಾಧನೆಯ ಕುರಿತಾದ ನಾಟಕ, ಭಾಷಣ, ಕವನ, ಛದ್ಮವೇಷ ಹಾಗೂ ಇನ್ನಿತರ ಸ್ಪರ್ಧಾ ಚಟುವಟಿಕೆಗಳಲ್ಲಿ ಅಬ್ಬಕ್ಕ'ಳ ಹೆಸರಿನಲ್ಲಿ ನಡೆಸಿದಾಗ ವೀರರಾಣಿಗೆ ಗೌರವ ಸಲ್ಲಿಸುವುದರ ಜೊತೆಗೆ ಆಕೆಯ ಸಾಹಸಗಾಥೆಯಿಂದ ಇಡೀ ಸ್ತ್ರೀ ಸಮಾಜ ಹೊಸ ಹುರುಪನ್ನು ಪಡೆಯಲು ಸಾಧ್ಯ. ಮಕ್ಕಳಿಗೆ ಈ ಕುರಿತಾದ ವಿಷಯಗಳನ್ನು ಪೋಷಕರು ತಪ್ಪದೇ ತಿಳಿಸುವಂತಹ ಕಾರ್ಯವನ್ನು ಮಾಡಬೇಕು. ಆನೇಕ ಪೋಷಕರು ಅಬ್ಬಕ್ಕ'ಳ ವೀರತ್ವ ಹಾಗೂ ಸಾಹಸವನ್ನು ತಮ್ಮ ಮಕ್ಕಳಿಗೆ ತಿಳಿಸಿ ಕೊಡುವ ಪ್ರಯತ್ನವನ್ನು ಮಾಡುತ್ತಿರುವುದು ಬಹಳ ಖುಷಿಯ ವಿಚಾರವಾಗಿದೆ. ಜವನೆರ್ ಬೆದ್ರ ಸಂಘಟನೆ ಅಬ್ಬಕ್ಕ'ಳ ಬಗೆಗೆ ಹಲವಾರು ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅಬ್ಬಕ್ಕ'ಳಿಗೆ ವಿಶೇಷ ಗೌರವವನ್ನು ಸಲ್ಲಿಸುತ್ತಿದೆ. ಸದ್ಯ ಜವನೆರ್ ಬೆದ್ರ'ದ ಸಕ್ರೀಯ ಸದಸ್ಯರಾಗಿರುವ ಶುಭಕರ್ ಪೂಜಾರಿಯವರು ತಮ್ಮ ಮಗಳಿಗೆ ವೀರರಾಣಿ ಅಬ್ಬಕ್ಕ'ಳ ವೇಷಭೂಷಣವನ್ನು ಧರಿಸಿ ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಿದ್ದರು.


ಪ್ರತಿಭಾ ಕಾರಂಜಿಯ ಸ್ಪರ್ಧೆಗೆ ಶುಭಕರ್ ಪೂಜಾರಿ ಹಾಗೂ ಗೌರಿ ದಂಪತಿಗಳ ಮಗಳು ಸುಹಾನಿ ಎಸ್ ಪೂಜಾರಿ ಅಬ್ಬಕ್ಕ'ಳ ವೇಷ ತೊಟ್ಟು ಚೌಟ ಅರಮನೆ ಮುಂಭಾಗದಲ್ಲಿರುವ ಚೌಟರಾಣಿ ಅಬ್ಬಕ್ಕ'ಳ ಪ್ರತಿಮೆಗೆ ಗೌರವ ಸಲ್ಲಿಸಿ ಆ ಬಳಿಕ ಸ್ಪರ್ಧೆಗೆ ಭಾಗವಹಿಸಿದ್ದರು, ಸ್ಪರ್ಧೆಯಲ್ಲಿ ಬಾಲಕೆ ದ್ವಿತೀಯ ಸ್ಥಾನವನ್ನು ಪಡೆಯುವ ಮೂಲಕ ಎಲ್ಲಾರ ಮೆಚ್ಚುಗೆಗೆ ಪಾತ್ರವಾಗಿದೆ. ಶುಭಕರ್ ಪೂಜಾರಿ ಪೂಜಾರಿಯವರ ಈ ನಡೆ ಆನೇಕರಿಗೆ ಮಾದರಿಯಾಗಿದ್ದು ಇನ್ನು ಮುಂದಿನ ದಿನಗಳಲ್ಲಿ ಇತರರು ಕೂಡ ತಮ್ಮ ಮಕ್ಕಳಿಗೆ ಅಬ್ಬಕ'ಳ ಯಶೋಗಾಥೆಯನ್ನು ವಿವಿಧ ಕಾರ್ಯಕ್ರಮಗಳಲ್ಲಿ ಪ್ರಚುರ ಪಡಿಸುವ ಕೆಲಸ ಮಾಡಬೇಕು ಎಂದು ಪರೋಕ್ಷ ಸಂದೇಶವನ್ನು ನೀಡಿದ್ದಾರೆ. ಬೆನಕ ಆರ್ಟ್ಸ್'ನ ರಾಜೇಶ್ ಅವರ ಕೈಚಳಕ ಅಬ್ಬಕ್ಕ'ಳ ಮೆರುಗನ್ನು ಮತ್ತಷ್ಟು ಹೆಚ್ಚಲು ಪ್ರಮುಖ ಕಾರಣ.



Post a Comment

0 Comments