ಅಬ್ಬಕ್ಕ 500ನೇ ಜನ್ಮ ಶತಮಾನೋತ್ಸವ.! 500 ಮಹಿಳಾ ಸಾಧಕಿಯರಿಗೆ ಚೌಟರಾಣಿ ಅಬ್ಬಕ್ಕ ಪ್ರೇರಣಾ ಪತ್ರ: ಜವನೆರ್ ಬೆದ್ರ ಫೌಂಡೇಶನ್

ತುಳುನಾಡಿನ ಹೆಮ್ಮೆಯ ಮಗಳು, ಬೆದ್ರದ ಮಣ್ಣಿನ ವೀರ ಪುತ್ರಿ ಚೌಟ ರಾಣಿ ಅಬ್ಬಕ್ಕಳ ಜನ್ಮ ಶತಮಾನೋತ್ಸವದ ಸವಿ ನೆನಪಿಗಾಗಿ ಜವನೆರ್ ಬೆದ್ರ ಫೌಂಡೇಶನ್(ರಿ.) ಕಿರಿದಾದ ಪ್ರತಿಮೆಯ ಬದಲಾಗಿ 6.5 ಆಡಿ ಎತ್ತರದ ಪ್ರತಿಮೆಯನ್ನು ನಿರ್ಮಾಣ ಮಾಡುವ ಮೂಲಕ ಐತಿಹಾಸಿಕ ಗೌರವ ಸಲ್ಲಿಸಿದರು. ಈ ಗಮನಾರ್ಹ ಗೌರವದ ಬಳಿಕ ಅಬ್ಬಕ್ಕಳ ಸಾಧನೆಯನ್ನು ಪ್ರತಿಯೊಬ್ಬರಿಗೆ ಪಸರಿಸುವ ನಿಟ್ಟಿನಲ್ಲಿ  ವಿವಿಧ ಕ್ಷೇತ್ರದಲ್ಲಿ ಗುರುತಿಸಿದ 500 ಮಹಿಳೆಯರಿಗೆ ಚೌಟರಾಣಿ ಅಬ್ಬಕ್ಕ ಪ್ರೇರಣಾ ಪತ್ರ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.

ವರ್ಷಪೂರ್ಣ ನಡೆಯುವಂತ ಕಾರ್ಯಕ್ರಮದಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟ ಪ್ರತಿ ಹಂತದಲ್ಲಿ ೫೦ ಮಹಿಳೆಯ ಹೆಸರು ಪ್ರಕಟಿಸಿ ಅವರಿಗೆ ಚೌಟ ರಾಣಿ ಅಬ್ಬಕ್ಕ ಪ್ರೇರಣ ಪತ್ರವನ್ನು ಗೌರವಪೂರ್ಣವಾಗಿ ನೀಡಲಾಗುವುದು ಎಂದು ಫೌಂಡೇಶನ್ ನ ಸಂಸ್ಥಾಪಕರು ಅಮರ್ ಕೋಟೆ ಅವರು ತಿಳಿಸಿದ್ದಾರೆ.


Post a Comment

0 Comments