ಮೂಡುಬಿದ್ರೆ: ಉಳ್ಳಾಲದ ರಾಣಿ ಅಬ್ಬಕ್ಕ ಇತಿಹಾಸದ ಪುಟದಲ್ಲಿ ಕಾಣಸಿಗುವ ಅಪ್ರತಿಮ ಧೀರ ಮಹಿಳೆಯರಲ್ಲಿ ಒಬ್ಬರು. ವಸಾಹತುಶಾಹಿಗಳ ವಿರುದ್ದ ಹೋರಾಡಿ ದಿಟ್ಟತನ ಪ್ರದರ್ಶಿಸಿದ ಅಬ್ಬಕ್ಕ ಮೂಡುಬಿದ್ರೆ ಮಣ್ಣಿನ ಮಗಳು ಎಂಬುದು ಮೂಡುಬಿದ್ರೆಯವರಿಗೆ ಅತ್ಯಂತ ಹೆಮ್ಮೆಯ ವಿಷಯ. ಈ ನಿಟ್ಟಿನಲ್ಲಿ ಜವನೆರ್ ಬೆದ್ರ ಫೌಂಡೇಶನ್(ರಿ.) ಅಬ್ಬಕ್ಕಳ ಐನ್ನೂರನೇ ಜನ್ಮ ಶತಮಾನೋತ್ಸವದ ಸವಿನೆಪಿಗಾಗಿ ಚೌಟರ ಅರಮನೆಯ ಮುಂಭಾಗದಲ್ಲಿ ನೂತನ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಈ ಪ್ರತಿಮೆಯ ಲೋಕಾರ್ಣೆ ಕಾರ್ಯಕ್ರಮವೂ ನವಂಬರ್ ೧ ರ ಶನಿವಾರ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿಗಳಾದ ದಿನೇಶ್ ಗುಂಡೂರಾವ್ ಲೋಕಾರ್ಪಣೆ ಮಾಡಲಿದ್ದಾರೆ.
ಈ ಸಂಧರ್ಭದಲ್ಲಿ ಮೂಡುಬಿದ್ರೆಯ ಜೈನ ಮಠದ ಮಹಾಸ್ವಾಮಿಜಿಗಳು, ಚೌಟ ಅರಮನೆಯ ಮುಖ್ಯಸ್ಥರು ಹಾಗೂ ಸ್ಥಳೀಯ ಶಾಸಕರನ್ನೊಳಗೊಂಡಂತೆ ಆನೇಕ ಗಣ್ಯರು ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮವೂ ನವಂಬರ್ ೦೧ ರ ಶನಿವಾರದಂದು ಬೆಳಿಗ್ಗೆ 11.30ಕ್ಕೆ ಸರಿಯಾಗಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಭಾಗವಹಿಸಿಬೇಕಾಗಿ ಕಾರ್ಯಕ್ರಮದ ಆಯೋಜಕರು ಮನವಿ ಮಾಡಿದ್ದಾರೆ.
0 Comments