ಮೂಡುಬಿದ್ರೆ: ರಾಜಕೀಯ ನಿಂತ ನೀರಲ್ಲ ಎಂಬುದು ರಾಜಕಾರಣಿಗಳು ದಿನಂಪ್ರತಿ ಹೇಳುವ ಸತ್ಯವಾದ ಮಾತು. ಒಂದು ಪಕ್ಷದಲ್ಲಿದ್ದು ನಾನಾ ಅಸಮಾಧಾನಗಳಿಗೆ ಬೇರೆ ಪಕ್ಷಕ್ಕೆ ಸೇರುವುದು ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಸಾಮಾನ್ಯವಾಗಿದೆ. ಸದ್ಯ ಬೆದ್ರದ ಪ್ರಭಾವಿ ರಾಜಕಾರಣಿಯೊಬ್ಬರು ಮತ್ತೇ ಕಾಂಗ್ರೆಸ್ ಪಕ್ಷ ಸೇರುವ ಮೂಲಕ 'ಘರ್ ವಾಪ್ಸಿ'ಯಾಗಲ್ಲಿದ್ದಾರೆ ಎಂಬುದು ಬೆದ್ರದ ರಾಜಕೀಯ ವಲಯದಲ್ಲಿ ಹಲವಾರು ಸಮಯಗಳಿಂದ ಕೇಳಿ ಬರುತ್ತಿದ್ದ ಮಾತು. ಸದ್ಯ ಅದಕ್ಕೆ ಪುಷ್ಠಿ ನೀಡುವಂತಹ ಸನ್ನಿವೇಶವೊಂದು ನಡೆದಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿಗಳಾಗಿರುವ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗುವ ಮೂಲಕ ಈ ಚರ್ಚೆಗೆ ಮತ್ತಷ್ಟು ಪುಷ್ಠಿ ನೀಡಿದೆ.
ಒಂದು ಮಾತಿನಲ್ಲಿ ಹೇಳುವುದಾದರೆ ಮೂಡುಬಿದ್ರೆಯಲ್ಲಿ ಆರಂಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಕೀರ್ತಿ ಕೆ.ಪಿ ಜಗದೀಶ್ ಅಧಿಕಾರಿಯವರಿಗೆ ಸಲ್ಲುತ್ತದೆ. ಅದರೆ ಅಂತಿಮ ಹಂತದಲ್ಲಿ ಪಕ್ಷಕ್ಕಾಗಿ ದುಡಿದು ಟಿಕೆಟ್ ಕೈ ತಪ್ಪಿದ್ದಕ್ಕೆ ಅಸಮಾಧಾನಗೊಂಡು ಬಿಜೆಪಿ ಪಕ್ಷವನ್ನು ಸೇರಿದರು. ಆ ಬಳಿಕ ಬಿಜೆಪಿ ಪಕ್ಷದಲ್ಲಿ ಟಿಕೆಟ್ ಪಡೆದು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು. ತೃತೀಯ ಸ್ಥಾನದಲ್ಲಿದ್ದ ಬಿಜೆಪಿಯನ್ನು ದ್ವಿತೀಯ ಸ್ಥಾನದಕ್ಕೆ ತಂದು ನಿಲ್ಲಿಸಿದ ಹೆಗ್ಗಳಿಗೆ ಕೆ.ಪಿ ಜಗದೀಶ್ ಅಧಿಕಾರಿಯವರಿಗೆ ಸಲ್ಲುತ್ತದೆ. ಬಿಜೆಪಿ ಪಕ್ಷದಲ್ಲಿದ್ದರೂ ತನ್ನ ಮಾತೃ ಪಕ್ಷದ ಪ್ರಭಾವಿ ರಾಜ್ಯ ನಾಯಕರ ಜೊತೆ ಉತ್ತಮ ಸಂಪರ್ಕ ಇಟ್ಟುಕೊಂಡಿರುವ ಅಧಿಕಾರಿಯವರು ಸದ್ಯ ಮಾತೃ ಪಕ್ಷದತ್ತ ಮುಖಮಾಡಿರುವುದು ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಕೆ.ಪಿ ಜಗದೀಶ್ ಅಧಿಕಾರಿಯವರು ಒಂದು ವೇಳೆ ಕಾಂಗ್ರೆಸ್ ಪಕ್ಷವನ್ನು ಮತ್ತೇ ಸೇರಿದರೆ ಅದು ಬೆದ್ರದ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಸಂಚಲನಕ್ಕೆ ಕಾರಣವಾಗಲಿದೆ. ಸದ್ಯ ತನ್ನ ಮಿತ್ರ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದು, ಅಧಿಕಾರಿಯವರು ಭೇಟಿಯಾದ ಸಂಧರ್ಭದಲ್ಲಿ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಕೂಡ ಉಪಸ್ಥಿತರಿದ್ದರು. ಈ ಹಿಂದೆ ಮಾಧ್ಯಮದಲ್ಲಿ ಪ್ರತಿಭಾ ಕುಳಾಯಿ ಹಾಗೂ ಅಧಿಕಾರಿಯವರಿಗೆ ಭಾರೀ ಜಟಾಪಟಿ ನಡೆದಿತ್ತು ಹಳೆಯ ಕೋಪವನ್ನು ಮರೆತು ರಾಜೀಮಾಡಿಕೊಂಡಿದ್ದಾರೆ ಎಂಬುದು ಬಲ್ಲ ಮೂಲಗಳಿಂದ ದೊರೆತ ಮಾಹಿತಿಯಾಗಿದೆ. ಒಟ್ಟಿನಲ್ಲಿ ಅಧಿಕಾರಿಯವರು ಕೇಸರಿ ಪಾಳಯವನ್ನು ಬಿಟ್ಟು ಮಾತೃ ಪಕ್ಷ ಕಾಂಗ್ರೆಸ್ ಜೊತೆ ಕೈ ಜೋಡಿಸ್ತಾರ ಎಂಬುದನ್ನು ಅಧಿಕಾರಿಯವರೇ ಸ್ಪಷ್ಟಪಡಿಸಬೇಕಿದೆ.
ಅಭಿವೃದ್ದಿ ಹಾಗೂ ಪರಿಸರ ಸಂರಕ್ಷಣೆಯ ಸುಧೀರ್ಘ ಚರ್ಚೆ:
ಡಿ.ಕೆ ಶಿವಕುಮಾರ್ ಅವರ ಬೆಂಗಳೂರಿನ ನಿವಾಸದಲ್ಲಿ ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಂಘಟನೆಯ ಸ್ಥಾಪಕರಾದ ತೋಂಸೆ ಜಯಕೃಷ್ಣ ಶೆಟ್ಟಿಯವರು ಭೇಟಿಯಾಗಿ ಅಭಿವೃದ್ದಿ ಹಾಗೂ ಪರಿಸರ ಸಂರಕ್ಷಣೆಯ ಕುರಿತಾದ ಸುಧೀರ್ಘ ಚರ್ಚೆಯನ್ನು ನಡೆಸಿದರು ಎನ್ನಲಾಗಿದೆ. ಈ ಸಂಧರ್ಭದಲ್ಲಿ ಸಂಸ್ಥೆಯ ರಾಜ್ಯ ಸಂಯೋಜಕರಾಗಿರುವ ಹಾಗೂ ಬಿಜೆಪಿಯ ನಾಯಕರಾಗಿರುವ ಕೆ.ಪಿ ಜಗದೀಶ್ ಅಧಿಕಾರಿ ಜೊತೆಯಾಗಿದ್ದರು.
0 Comments