ಉಡುಪಿ: ದೂರದ ಮುಂಬೈಯಲ್ಲಿ ಖ್ಯಾತ ಉದ್ಯಮಿಯಾಗಿ, ಪರಿಸರ ಪ್ರೇಮಿಯಾಗಿ ಖ್ಯಾತಿ ಪಡೆದಿರುವ ತೋನ್ಸೆ ಜಯಕೃಷ್ಣ ಎ ಶೆಟ್ಟಿಯವರ 66ನೇ ವರ್ಷದ ಹುಟ್ಟುಹಬ್ಬವನ್ನು ತೋನ್ಸೆಯ ಶ್ರೀ ಭದ್ರಕಾಳಿ ಮಹಾಮಾರಿಕಾಂಬಾ ದೇವಸ್ಥಾನದಲ್ಲಿ ಗಣ್ಯರು ಹಾಗೂ ಊರವರ ಸಮ್ಮುಖದಲ್ಲಿ ಆಚರಿಸಲಾಯಿತು. ಜಯಕೃಷ್ಣ ಶೆಟ್ಟಿಯವರ ಹುಟ್ಟುಹಬ್ಬದ ಪ್ರಯುಕ್ತ ದೇವರಿಗೆ ವಿಶೇಷ ಸೋಣ ಆರತಿಯನ್ನು ಮಾಡುವುದರ ಮೂಲಕ ಉತ್ತಮ ಆರೋಗ್ಯ ಹಾಗೂ ಉತ್ತರೊತ್ತರ ಆಭಿವೃದ್ದಿಗಾಗಿ ದೇವರಲ್ಲಿ ಪ್ರಾರ್ಥಿಸಲಾಯಿತು.
ತೋನ್ಸೆ ಅವರ ಜನ್ಮದಿನದ ಪ್ರಯುಕ್ತ ಅಲ್ಲಿ ನೆರೆದಿದ್ದ ಭಕ್ತ ಸಮೂಹಕ್ಕೆ ಅನ್ನಸಂತರ್ಪಣೆಯ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಉದ್ಯಮಿ ಹಾಗೂ ಪರಿಸರ ಪ್ರೇಮಿಯಾಗಿ ಗುರುತಿಸಿಕೊಂಡಿರುವ ತೋನ್ಸೆ ಅವರ ಜನ್ಮದಿನದ ಪ್ರಯುಕ್ತ ದೇವಸ್ಥಾನದ ಪ್ರಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಗಣ್ಯರಾದ ಜಗದೀಶ್ ಅಧಿಕಾರಿ, ಸಾಮಾಜೀಕ ಹೋರಾಟಗಾರರಾದ ವಸಂತ್ ಗಿಳಿಯಾರ್ ಹಾಗೂ ವಿಲ್ಸನ್ ಫೆರ್ನಾಂಡಿಸ್, ಅರುಣ್ ಶೆಟ್ಟಿ ಮತ್ತಿತರರು ಭಾಗಿಯಾಗಿ ಶುಭಾಶಯವನ್ನು ಕೋರಿದರು. ದೇವಸ್ಥಾನದ , ಊರ ಪ್ರಮುಖರು, ಭಜನಾ ಸಮಿತಿಯವರು ಹಾಗೂ 300ಕ್ಕು ಅಧಿಕ ಗ್ರಾಮಸ್ಥರು ಭಾಗಿಯಾಗಿ ಶುಭಾಶಯ ಕೋರಿದರು. ದೇವಸ್ಥಾನ ಸಂಚಾಲಕರು ಹಾಗೂ ಹಿರಿಯರಾದ ರಘುರಾಮ್ ಶೆಟ್ಟಿಯವರು ಕಾರ್ಯಕ್ರಮವನ್ನು ಅಧ್ಬುತವಾಗಿ ನಿರೂಪಿಸಿದರು.
0 Comments