ಮೂಡುಬಿದ್ರೆ: ಸಮಾಜಕ್ಕೆ ನನ್ನಿಂದ ಏನಾದರೂ ಸೇವೆಯನ್ನು ನೀಡಬೇಕು ಎನ್ನುವ ನಿಟ್ಟಿನಲ್ಲಿ 'ಜವನೆರ್ ಬೆದ್ರ' ಎನ್ನುವ ಸಂಘಟನೆಯನ್ನು ಸ್ಥಾಪಿಸಿ, ಯುವಕರ ತಂಡವನ್ನು ಕಟ್ಟಿ ಸ್ವಚ್ಚತೆ, ರಕ್ತದಾನದಂತಹ ಮಹಾನ್ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜದಲ್ಲಿ ತನ್ನ ಸೇವೆಯ ಮೂಲಕ ಹೆಸರುವಾಸಿಯಾಗಿರುವ ಬೆದ್ರದ ಅಮರ್ ಕೋಟೆಯವರನ್ನು ಆಳ್ವಾಸ್ ಶಿಕ್ಷಣ ಸಂಸ್ಥೆ ಗೌರವಿಸಿದೆ.
ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಆಯೋಜಿಸಿದ್ದ ಪ್ರೋವಿನಿಯೋ ೨.೦ ರಾಷ್ಟ್ರೀಯ ಮಟ್ಟದ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಅಮರ್ ಕೋಟೆಯವರನ್ನು ಗೌರವಿಸಲಾಯಿತು. ರಕ್ತನಿಧಿ ಕಾರ್ಯಕ್ರಮದ ಮೂಲಕ ಸುಮಾರು ಹತ್ತು ಸಾವಿರಕ್ಕೂ ಅಧಿಕ ಯುನಿಟ್ ರಕ್ತವನ್ನು ಪೂರೈಸುವ ಮಹಾನ್ ಕಾರ್ಯದಲ್ಲಿ ಯಶಸ್ವಿಯಾಗಿರುವ ಅಮರ್ ಕೋಟೆಯವರನ್ನು ಇಂದು ನಡೆದ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ. ಮೋಹನ್ ಆಳ್ವರಿಂದ ಗೌರವ ಸ್ವೀಕರಿಸಿದ ಅಮರ್ ಕೋಟೆ ಅವರ ಸೇವೆಗೆ ಸಂದ ಗೌರವ ಎಂದು ಸಂಘಟನೆಯ ಪ್ರಮುಖರು ಖುಷಿ ವ್ಯಕ್ತಪಡಿಸಿದ್ದಾರೆ.
0 Comments